ಸಿಂಗಪುರ ಏರ್ ಲೈನ್ಸ್ ಮಹಿಳಾ ಸಿಬ್ಬಂದಿಗೆ ಭಾರತೀಯ ಯುವಕನೊಬ್ಬ ಲೈಂಗಿಕ ರಿರುಕುಳ ನೀಡಿರುವ ಘಟನೆ ನಡೆದಿದೆ.
ಆಸ್ಟ್ರೇಲಿಯಾದಿಂದ ಹೊರಟಿದ್ದ ಸಿಂಗಾಪುರ ಏರ್ ಲೈನ್ಸ್ ವಿಮಾನದಲ್ಲಿ 28 ವರ್ಷದ ಮಹಿಳಾ ಸಿಬ್ಬಂದಿಗೆ ಯುವಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಮಹಿಳಾ ಸಿಬ್ಬಂದಿ ಪ್ರಯಾಣಿಕರೊಬ್ಬರನ್ನು ಶೌಚಾಲಯಕ್ಕೆ ಕರೆದೊಯ್ಯುತ್ತಿದ್ದಾಗ ಕೆಳಗೆ ಬಿದ್ದ ಟಿಶ್ಯೂ ಪೇಪರ್ ನ್ನು ಗಮನಿಸಿದ್ದರು. ಅದನ್ನು ತೆಗೆದುಕೊಳ್ಳಲು ಕೆಳಗೆ ಬಾಗಿದಾಗ ಹಿಂದಿನಿಂದ ವ್ಯಕ್ತಿ ಬಂದು ಆಕೆಯನ್ನು ತಬ್ಬಿ ಶೌಚಾಲಯದೊಳಗೆ ತಳ್ಳಿದ್ದಾನೆ. ತಕ್ಷಣ ಅಲ್ಲಿದ್ದವರು ಮಹಿಳಾ ಸಿಬ್ಬಂದಿಯನ್ನು ಶೌಚಾಲಯದಿಂದ ಹೊರತರಲು ಸಹಾಯ ಮಾಡಿದರು.
ಘಟನೆ ಬಳಿಕ ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣದಲ್ಲಿ ಯುವಕನನ್ನು ಬಂಧಿಸಲಾಗಿದೆ. ಯುವಕನನ್ನು ರಜತ್ ಎಂದು ಗುರುತಿಸಲಾಗಿದ್ದು, ಅಪರಾಧ ಸಾಬೀತಾದರೆ ಆರೋಪಿಗೆ ಮೂರು ವರ್ಷ ಜೈಲುಶಿಕ್ಷೆ, ದಂಡ ಅಥವಾ ಛಡಿಯೇಟು ಅಥವಾ ಬೇರೆ ಯಾವುದೇ ಶಿಕ್ಷೆ ವಿಧಿಸಬಹುದು.