ಮನೆ ಮಾಲೀಕನ ಮಗ ತನ್ನ ಸ್ನೇಹಿತರೊಂದಿಗೆ ಸೇರಿ ಮೂರು ವರ್ಷದ ಕಂದಮ್ಮನ ಮೇಲೆ ಗ್ಯಾಂಗ್ ರೇಪ್ ನಡೆಸಿರುವ ಘೋರ ಕೃತ್ಯ ಮಧ್ಯಒರದೇಶದಲ್ಲಿ ನಡೆದಿದೆ.
ಇಲ್ಲಿನ ಗ್ವಾಲಿಯರ್ನ ದಾಬ್ರಾ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಚಾಕೋಲೆಟ್ ಕೊಡಿಸುವುದಾಗಿ ಮಗುವನ್ನು ಕಾರಿನಲ್ಲಿ ಕರೆದೊಯ್ದು ದುರುಳರು ಗ್ಯಾಂಗ್ ರೇಪ್ ನಡೆಸಿದ್ದಾರೆ. ಕಾರಿನಲ್ಲಿಯೇ ಕೃತ್ಯವೆಸಗಿದ್ದಾರೆ.
ಕೃತ್ಯದ ಬಳಿಕ ಮಗುವನ್ನು ಮನೆ ಬಳಿ ಬಿಟ್ಟು ಹೋಗಿದ್ದಾರೆ. ಓರ್ವ ಆರೋಪಿ ಸಂತ್ರಸ್ತ ಮಗುವಿನ ಕುಟುಂಬ ಬಾಡಿಗೆಗೆ ಇದ್ದ ಮನೆಯ ಮಾಲೀಕನ ಮಗ. ಮಗುವಿನ ಸ್ಥಿತಿ ಕಂಡು ಮಗುವನ್ನು ಕೇಳಿದಾಗ ದುರುಳರು ತನ್ನನ್ನು ಚಾಕೋಲೆಟ್ ಕೊಡಿಸುವುದಾಗಿ ಕರೆದೊಯ್ದು ಕಾರಿನಲ್ಲಿ ಹಿಂಸಿಸಿದ್ದಾಗಿ ಹೇಳಿದ್ದಾಳೆ. ತಕ್ಷಣ ಪೋಷಕರು ದಾಬ್ರಾಅ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.