ಬೆಂಗಳೂರು : ಕೇಂದ್ರ ಲೋಕಸೇವಾ ಆಯೋಗವು ನಡೆಸಿದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿರುವ ಎಲ್ಲಾ ಪರೀಕ್ಷಾರ್ಥಿಗಳಿಗೆ ಅಭಿನಂದನೆಗಳು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಕೇಂದ್ರ ಲೋಕಸೇವಾ ಆಯೋಗವು ನಡೆಸಿದ ಪರೀಕ್ಷೆಯಲ್ಲಿ ತೇರ್ಗಡೆಹೊಂದಿ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿರುವ ಎಲ್ಲಾ ಪರೀಕ್ಷಾರ್ಥಿಗಳಿಗೆ ಅಭಿನಂದನೆಗಳು. ಈ ಪರೀಕ್ಷೆಯಲ್ಲಿ ಕರ್ನಾಟಕದ ಆರ್.ರಂಗಮಂಜು ಅವರು 24 ನೇ ರ್ಯಾಂಕ್, ಡಾ.ಸಚಿನ್ ಬಸವರಾಜ್ ಗುತ್ತೂರು ಅವರು 41 ನೇ ರ್ಯಾಂಕ್ ಪಡೆದಿದ್ದು, ಒಟ್ಟು 20 ಜನರು ರಾಜ್ಯದಿಂದ ಆಯ್ಕೆಯಾಗಿರುವುದು ಖುಷಿಯ ವಿಚಾರ.
ನಿಮ್ಮೆಲ್ಲದ ಕಠಿಣ ಅಭ್ಯಾಸ ಮತ್ತು ಪರಿಶ್ರಮ ಇಂದು ಫಲ ನೀಡಿದೆ. ನಿಮ್ಮ ಸಾಧನೆ ಭವಿಷ್ಯದಲ್ಲಿ ಉನ್ನತ ಹುದ್ದೆಗಳ ಕನಸು ಕಂಡಿರುವ ಲಕ್ಷಾಂತರ ಯುವಮನಸುಗಳಿಗೆ ಸ್ಪೂರ್ತಿಯಾಗಲಿದೆ. ದಕ್ಷತೆ, ನಿಷ್ಠೆ, ಸೇವಾ ಬದ್ಧತೆ ಮತ್ತು ಪ್ರಾಮಾಣಿಕತೆ ನಿಮ್ಮ ಔದ್ಯೋಗಿಕ ಜೀವನದ ಹಾದಿಯ ಗುರಿಯಾಗಿರಲಿ. ರಾಷ್ಟ್ರದ ಅಭಿವೃದ್ಧಿಯಲ್ಲಿ ನಿಮ್ಮ ಕೊಡುಗೆಯನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಕೇಂದ್ರ ಲೋಕಸೇವಾ ಆಯೋಗವು ನಡೆಸಿದ ಪರೀಕ್ಷೆಯಲ್ಲಿ ತೇರ್ಗಡೆಹೊಂದಿ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿರುವ ಎಲ್ಲಾ ಪರೀಕ್ಷಾರ್ಥಿಗಳಿಗೆ ಅಭಿನಂದನೆಗಳು. ಈ ಪರೀಕ್ಷೆಯಲ್ಲಿ ಕರ್ನಾಟಕದ ಆರ್.ರಂಗಮಂಜು ಅವರು 24 ನೇ ರ್ಯಾಂಕ್, ಡಾ.ಸಚಿನ್ ಬಸವರಾಜ್ ಗುತ್ತೂರು ಅವರು 41 ನೇ ರ್ಯಾಂಕ್ ಪಡೆದಿದ್ದು, ಒಟ್ಟು 20 ಜನರು ರಾಜ್ಯದಿಂದ ಆಯ್ಕೆಯಾಗಿರುವುದು…
— Siddaramaiah (@siddaramaiah) April 23, 2025