ಬೆಳಗಾವಿ: ಅಪಾರ್ಟ್ ಮೆಂಟ್ ನ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮಹಿಳೆಯನ್ನು ಹತ್ಯೆಗೈದು ಮಂಗಳಸೂತ್ರ, ಓಲೆ, ಉಂಗುರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಅಂಜನಾ ಅಜಿತ್ (49) ಮೃತ ಮಹಿಳೆ. ಲಕ್ಷ್ಮೀ ನಗರದ ಅಪಾರ್ಟ್ ಮೆಂಟ್ ನಲ್ಲಿ ಅಂಜನಾ ಪತಿಯೊಂದಿಗೆ ವಾಸವಾಗಿದ್ದರು. ಪತಿ ಅಜಿತ್ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಅವರು ಮನೆಗೆ ಬಂದು ನೋಡಿದಾಗ ಪತ್ನಿ ಕೊಲೆಯಾಗಿರುವುದು ತಿಳಿದುಬಂದಿದೆ.
ಪತ್ನಿಯ ಮಾಂಗಲ್ಯ, ಓಲೆ, ಉಂಗುರಗಳನ್ನು ಕಿತ್ತುಕೊಂಡು ಕತ್ತು ಹಿಸುಕಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.