ನವದೆಹಲಿ : ವಾಣಿಜ್ಯ ನಗರಿ ಮುಂಬಯಿನಲ್ಲಿ 24 ಕ್ಯಾರೆಟ್’ನ 10 ಗ್ರಾಂ ಚಿನ್ನದ ಬೆಲೆ 100 ರೂಪಾಯಿ ಏರಿಕೆ ಕಂಡು 1,01,350 ರೂಪಾಯಿಗೆ ತಲುಪಿದೆ.
ಹೌದು. ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದು, ಜನಸಾಮಾನ್ಯರು ಚಿನ್ನ ಕೊಳ್ಳುವುದು ಕನಸಿತ ಮಾತಾಗಿದೆ. ಮುಂಬಯಿನಲ್ಲಿ 24 ಕ್ಯಾರೆಟ್’ನ 10 ಗ್ರಾಂ ಚಿನ್ನದ ಬೆಲೆ 100 ರೂಪಾಯಿ ಏರಿಕೆ ಕಂಡು 1,01,350 ರೂಪಾಯಿಗೆ ತಲುಪಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 100 ರು ಏರಿಕೆ ಕಂಡು 92,900ರು ಬೆಲೆ ಹಾಗೂ ಅಪರಂಜಿ 10 ಗ್ರಾಂಗೆ 100 ರು ಏರಿಕೆಯಾಗಿ 98,900ರು ನಷ್ಟಿದೆ. ಮುಂಬೈನಲ್ಲಿ ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 1,01,000 ರೂ.ಗೆ ಇಳಿದಿದೆ.
ಜಾಗತಿಕ ಆರ್ಥಿಕ ಅನಿಶ್ಚಿತತೆ ಮತ್ತು ಯುಎಸ್ ಆರ್ಥಿಕ ಹಿಂಜರಿತದ ಭೀತಿಯ ನಡುವೆ ಕಳೆದ ಕೆಲವು ತಿಂಗಳುಗಳಿಂದ ಚಿನ್ನದ ಬೆಲೆಗಳು ಹೆಚ್ಚುತ್ತಿವೆ.ಮಂಗಳವಾರ, ಅಂತರರಾಷ್ಟ್ರೀಯ ಪ್ರವೃತ್ತಿಗೆ ಅನುಗುಣವಾಗಿ ಭಾರತದಲ್ಲಿ ಚಿನ್ನದ ಬೆಲೆಗಳು ಏರಿಕೆಯಾಗಿವೆ.
You Might Also Like
TAGGED:ಆಭರಣ ಪ್ರಿಯರಿಗೆ ಬಿಗ್ ಶಾಕ್ '