ಬೆಂಗಳೂರು: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಹೈಕೋರ್ಟ್ ನ 7 ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ.
ಸುಪ್ರೀಂ ಕೋರ್ಟ್ ನ ಕೊಲಿಜಿಯಂ ನಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸು ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಕರ್ನಟಕ ಹೈಕೋರ್ಟ್ ನ ನಾಅಲ್ವರು ನ್ಯಾಯಾಮೂರ್ತಿಗಳನ್ನು, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಬೇರೆ ಬೇರೆ ರಾಜ್ಯಗಳ ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಲಾಗಿದೆ.
ಕರ್ನಾಟಕ ಹೈಕೋರ್ಟ್ ನ ನ್ಯಾ.ಕೃಷ್ಣ ದೀಕ್ಷಿತ್ ಅವರನ್ನು ಓಡಿಶಾ ಹೈಕೋರ್ಟ್ ಗೆ, ನ್ಯಾ.ಎನ್.ಶ್ರೀನಿವಾಸ್ ಸಂಜಯ್ ಗೌಡ ಅವರನ್ನು ಗುಜರಾತ್ ಹೈಕೊರ್ಟ್ ಗೆ, ನ್ಯಾ. ಕೃಷ್ಣನ್ ನಟರಾಜನ್ ಅವರನ್ನು ಕೇರಳ ಹೈಕೊರ್ಟ್ ಗೆ ನ್ಯಾ. ಹೇಮಂತ್ ಚಂದನ ಗೌಡರ್ ಮದ್ರಾಸ್ ಹೈಕೋರ್ಟ್ ಗೆ ವರ್ಗಾವಣೆ ಮಾಡಿ ಆದೇಶ ನೀಡಲಾಗಿದೆ.
ತೆಲಂಗಾಣ ಹೈಕೋರ್ಟ್ ನ ನ್ಯಾ. ಪೆರುಗು ಶ್ರೀಸುಧ ಅವರನ್ನು ಕರ್ನಾಟಕ ಹೈಕೊರ್ಟ್ ಗೆ ನ್ಯಾ.ಸುರೇಂದರ್ ಅವರನ್ನು ಮದ್ರಾಸ್ ಹೈಕೋರ್ಟ್ ಗೆ ಆಂಧ್ರ ಹೈಕೋರ್ಟ್ ನ ನ್ಯಾ.ಡಾ.ಕೆ.ಮನ್ಮಧ ರಾವ್ ಅವರನ್ನು ಕರ್ನಾಟಕ ಹೈಕೋರ್ಟ್ ಗೆ ವರ್ಗಾವಣೆ ಮಾಡಲಾಗಿದೆ.