ಬೆಂಗಳೂರು : ಪ್ರಾಥಮಿಕ ಶಾಲಾ ವೃಂದದಿಂದ ಪ್ರೌಢ ಶಾಲಾ ಸಹ ಶಿಕ್ಷಕರ ಗ್ರೇಡ್-2 ವೃಂದಕ್ಕೆ ಮುಂಬಡ್ತಿ ನೀಡುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 6 ರಿಂದ 8ನೇ ತರಗತಿಯ ಪದವೀಧರ ಪ್ರಾಥಮಿಕ ಶಿಕ್ಷಕರಿಗೆ ಪ್ರೌಢ ಶಾಲಾ ಸಹ ಶಿಕ್ಷಕರು ಗ್ರೇಡ್-2 ಹುದ್ದೆಗೆ ಬಡ್ತಿ ನೀಡುವ ಕುರಿತು ಉಲ್ಲೇಖ (3) ರ ಪತ್ರದಲ್ಲಿ ಉಲ್ಲೇಖ(1) ರಲ್ಲಿ ರಾಜ್ಯ ಪತ್ರದಲ್ಲಿ ಪ್ರಕಟಿತವಾದ ವೃಂದ ಮತ್ತು ನೇಮಕಾತಿ ನಿಯಮದಂತೆ ಸರ್ಕಾರಿ ಪ್ರಾಥಮಿಕ ಶಾಲಾ ವೃಂದದ ಶಿಕ್ಷಕರಿಂದ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ವೃಂದಕ್ಕೆ ಬಡ್ತಿ ನೀಡುವ ಕುರಿತು ಕಲಬುರಗಿ ವಿಭಾಗದ ಜಿಲ್ಲಾ ಉಪನಿರ್ದೇಶಕರು(ಆಡಳಿತ) ಇವರುಗಳಿಗೆ ವೇಳಾ ಪಟ್ಟಿಯೊಂದಿಗೆ ಬಡ್ತಿಗೆ ಕ್ರಮವಹಿಸಲು ಸೂಚಿಸಿರುತ್ತೀರಿ.
ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 6 ರಿಂದ 8 ನೇ ತರಗತಿ ಪದವೀಧರ ಶಿಕ್ಷಕರಿಗೆ ಪ್ರೌಢ ಶಾಲಾ ಶಿಕ್ಷಕರು ಗ್ರೇಡ್-2 ಹುದ್ದೆಗೆ ಬಡ್ತಿ ನೀಡುವ ಕುರಿತು ಮಾನ್ಯ ಕೆ.ಎ.ಟಿ. ಅರ್ಜಿ ಸಂಖ್ಯೆ 3443-3503/2020 ಮತ್ತು 857-917/2021 ಗಳಲ್ಲಿ ಶ್ರೀ ನಾರಾಯಣ ಬಾಳಪ್ಪಾ ಮತ್ತಿತರರು ದಾಖಲಿಸಿದ ದಾವೆಗೆ ಘನ ನ್ಯಾಯಾಲಯವು ದಿ:12-05-2021 ರಂದು ತೀರ್ಪು ನೀಡಿದ್ದು, ಸದರಿ ತೀರ್ಪಿನಲ್ಲಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಹುದ್ದೆಯಿಂದ ಪ್ರೌಢ ಶಾಲಾ ಸಹ ಶಿಕ್ಷಕರ ಹುದ್ದೆಗೆ ನೀಡಿರುವ ಬಡ್ತಿಗಳನ್ನು ಹಿಂಪಡೆಯಲು ಸೂಚಿಸಿರುತ್ತದೆ. ಆದ್ದರಿಂದ ಈ ತೀರ್ಪು ಆದ ನಂತರ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯಿಂದ ಪ್ರೌಢ ಶಾಲಾ ಸಹ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವುದನ್ನು ತಡೆಹಿಡಿಯಲು ಈ ಕಛೇರಿಯಿಂದ ಸೂಚಿಸಲಾಗಿದೆ.
ಸರ್ಕಾರದ ಅನುಮತಿಯಂತೆ ಮಾನ್ಯ ಕೆ.ಎ.ಟಿ. ಅರ್ಜಿ ಸಂಖ್ಯೆ 3443-3503/2020 ಮತ್ತು 857-917/2021 ಗಳ ತೀರ್ಪನ್ನು ಪ್ರಶ್ನಿಸಿ ಘನ ಉಚ್ಚ ನ್ಯಾಯಾಲಯ, ಬೆಂಗಳೂರು, ಇಲ್ಲಿ WP 16936/2021 ನ್ನು ಸಲ್ಲಿಸಿದ್ದು ಮಾನ್ಯ ನ್ಯಾಯಾಲಯವು ದಿ:31-08-2024 ರಲ್ಲಿ ತೀರ್ಪು ನೀಡಿರುತ್ತದೆ. ಸದರಿ ತೀರ್ಪಿನಲ್ಲಿ 2016 ರ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ನಿಯಮಗಳು ಅಂತಿಮಗೊಂಡ ನಂತರ ಸರ್ಕಾರದ ಹಂತದಲ್ಲಿ ಈಗಾಗಲೇ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಹುದ್ದೆಯಿಂದ ಪ್ರೌಢ ಶಾಲಾ ಸಹ ಶಿಕ್ಷಕರ ಹುದ್ದೆಗೆ ನೀಡಿರುವ ಬಡ್ತಿಗಳನ್ನು ಕೆ.ಎ.ಟಿ. ಆದೇಶದಂತೆ ಹಿಂಪಡೆಯುವ ಕುರಿತು ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಲು ಆದೇಶಿಸಿರುತ್ತದೆ. ತೀರ್ಪಿನ ಉದ್ಭತ ಭಾಗ ಈ ಕೆಳಗಿನಂತೆ ಇರುತ್ತದೆ.

