ಬೆಂಗಳೂರು: ಬೆಂಗಳೂರಿನಲ್ಲಿ ಮಂಗಳಮುಖಿಯೋರ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೆ.ಆರ್.ಪುರಂ ನಲ್ಲಿ ನಡೆದಿದೆ.
ತನುಶ್ರೀ (40) ಹತ್ಯೆಯಾದ ಮಂಗಳಮುಖಿ. ತನುಶ್ರೀ ಕರವೇ ಕಾರ್ಯಕರ್ತೆ ಕೂಡ ಆಗಿದ್ದರು. ಅಲ್ಲದೇ ಸಂಗಮ ಎನ್ ಜಿಒ ನಡೆಸುತ್ತಿದ್ದರು. ಮೂರು ತಿಂಗಳ ಹಿಂದಷ್ಟೇ ಜಗನ್ನಾಥ ಎಂಬುವವರನ್ನು ವಿವಾಹವಾಗಿದ್ದರು. ಹತ್ಯೆ ಬಳಿಕ ಪತಿ ಜಗನ್ನಾಥ ಹಾಗೂ ಮನೆ ಕೆಲಸದವಳು ಪರಾರಿಯಾಗಿದ್ದಾರೆ.
ಮೂರು ದಿನಗಳ ಹಿಮ್ದೆಯೇ ತನುಶ್ರೀ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಕೆ.ಆರ್.ಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.