ಬೆಂಗಳೂರು: ಜನಿವಾರ ವಿವಾದಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯದಲ್ಲಿ ಶಿವದಾರ, ಉಡುದಾರ, ಜನಿವಾರಕ್ಕೆ ಕತ್ತರಿ ಸರ್ಕಾರ ಕತ್ತರಿ ಹಾಕುತ್ತಿದೆ. ಇವುಗಳನ್ನು ಬಂದ್ ಮಾಡುವ ರೀತಿ ನಡೆದುಕೊಳ್ಳುತ್ತಿದೆ. ಹಿಜಾಬ್ ಗೆ ಮಾತ್ರ ಬಹುಪರಾಕ್ ಎನ್ನಲಾಗುತ್ತಿದೆ ಎಂದು ಕಿಡಿಕಾರಿದರು.
ಜನಿವಾರ ಒಂದು ದಾರ ಅಷ್ಟೇ, ಹಿಜಾಬ್ ರೀತಿ ಬಟ್ಟೆ ಅಲ್ಲ. ಜನಿವಾರವನ್ನು ತೆಗೆಸಿ ಅವರ ಭಾವನೆಗಳಿಗೆ ಘಾಸಿ ಮಾಡ್ತೀರಾ? ಹಿಂದೂಗಳನ್ನು ಅವಮಾನಿಸುವುದೇ ಕಾಂಗ್ರೆಸ್ ನ ವಿಕೃತ ಮನಸ್ಥಿತಿ ಎಂದು ವಾಗ್ದಾಳಿ ನಡೆಸಿದರು.
ಹೆಣ್ಮಕ್ಕಳ ತಾಳಿ, ಕಾಲುಂಗರಕ್ಕೂ ಅವಕಾಶ ನೀಡದ ಸ್ಥಿತಿ. ಜನಿವಾರ ಹಾಕಿದವರನ್ನು, ಮಾಂಗಲ್ಯ, ಕಾಲುಂಗರವನ್ನೂ ಚೆಕ್ ಮಾಡಿ ಬಿಡ್ತಾರೆ. ಹಿಜಾಬ್, ಬುರ್ಖಾ ಹಾಕಿದವರಿಗೆ ಎಲ್ಲೂ ಚೆಕಿಂಗ್ ಇಲ್ಲ. ಎಲ್ಲಾದರೂ ಒಂದೇ ಒಂದು ಕಡೆ ಚೆಕಿಂಗ್ ಇದ್ಯಾ? ರಾಜ್ಯದ 7 ಕೋಟಿ ಕನ್ನಡಿಗರು ಇದನ್ನು ಅರ್ಥಮಾಡಿಕೊಳ್ಳಬೇಕು. ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ದಮನಮಾಡುತ್ತಿದೆ. ಅವಮಾನ ಮಾಡುತ್ತಿದೆ. ರಾಜ್ಯದಲ್ಲಿ ಹಿಂದೂಗಳಿಗೆ ಅವಮಾನವಾದರೆ ಕಾಂಗ್ರೆಸ್ ಗೆ ವಿಕೃತ ಸಂತೋಷವಾಗುತ್ತದೆ. ಸರ್ಕರದ ಈ ಧೋರಣೆಯನ್ನು ಜನ ಅರ್ಥಮಾಡಿಕೊಳ್ಳಲಿ ಎಂದು ಗುಡುಗಿದರು.