ಹುಬ್ಬಳ್ಳಿ: ರೈಲು ಸುರಕ್ಷತಾ ಕಾಮಗಾರಿ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ವಿಜಯಪುರ ನಡುವೆ ಸಂಚರಿಸುವ ಕೆಲ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಈ ಬಗ್ಗೆ ನೈಋತ್ಯ ರೇಲ್ವೆ ಇಲಾಖೆ ಮಾಹಿತಿ ನೀಡಿದೆ.
ರೈಲು ನಿಲ್ದಾಣಗಳಲ್ಲಿ ಸುರಕ್ಷತೆಗೆ ಸಂಬಂಧಿಸಿದಂತೆ ನೈಋತ್ಯ ರೈಲ್ವೆಯು ಕಾಮಗಾರಿ ಕಾರ್ಯವನ್ನು ಹಮ್ಮಿಕೊಂಡಿದೆ. ಇದರ ಜೊತೆಗೆ ಹುಬ್ಬಳ್ಳಿ- ಗದಗ-ವಿಜಯಪುರ ಮಾರ್ಗದ ಕೆಲವು ರೈಲುಗಳ ಸಂಚಾರವನ್ನು ಐದು ದಿನ ರದ್ದು ಮಾಡಲಾಗಿದೆ. ರದ್ದುಗೊಂಡಿರುವ ರೈಲುಗಳ ಮಾಹಿತಿ ಈ ಕೆಳಗಿನಂತಿದೆ.
ರೈಲು ಸಂಖ್ಯೆ 06920 : ವಿಜಯಪುರ-ಹುಬ್ಬಳ್ಳಿ
06919 : ಹುಬ್ಬಳ್ಳಿ-ವಿಜಯಪುರ
56906 : ಹುಬ್ಬಳ್ಳಿ-ಸೋಲಾಪುರ
56903 : ಸೋಲಾಪುರ-ಧಾರವಾಡ
11415 : ಸೋಲಾಪುರ-ಹೊಸಪೇಟೆ
11416 : ಹೊಸಪೇಟೆ-ಸೋಲಾಪುರ
07329 : ಹುಬ್ಬಳ್ಳಿ-ವಿಜಯಪುರ
07330 : ವಿಜಯಪುರ-ಹುಬ್ಬಳ್ಳಿ ರೈಲು ಸಂಚಾರ ತಾತ್ಕಲೈಕವಾಗಿ ರದ್ದುಗೊಂಡಿವೆ.