ಕಲಬುರಗಿ: ಈಗಾಗಲೇ ಸಿಎಂ ಗಾದಿಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಫೈಟ್ ಮಾಡುತ್ತಿದ್ದಾರೆ. ಇವನ ನಡುವೆ ಮೂರನೇ ವ್ಯಕ್ತಿ ಪ್ರವೇಶ ಮಾಡಲಿದ್ದು, ಇಬ್ಬರ ಜಗಳದಲ್ಲಿ ಮೂರನೇ ವ್ಯಕ್ತಿಗೆ ಲಾಭವಾಗಲಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಕಲಬುರಗಿಯಲ್ಲಿ ನಡೆದ ಬಿಜೆಪಿ ಜನಾಕ್ರೋಶ ಸಮಾವೇಶದಲ್ಲಿ ಮಾತನಾಡಿದ ಶ್ರೀರಾಮುಲು, ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಮಗನನ್ನು ಸಿಎಂ ಮಾದಲು ತಾವೇ ಸರ್ಕಾರವನ್ನು ಬೀಳಿಸಲಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಮೊನ್ನೆ ಖರ್ಗೆಯವರು ಸರ್ಕಾರ ಬೀಳುವ ಬಗ್ಗೆ ಮಾತನಾಡಿದ್ದಾರೆ. ಮೋದಿಯವರು ಈ ಸರ್ಕಾರ ಬೀಳಿಸುತ್ತಾರೆ ಎಂದಿದ್ದಾರೆ. ಮೋದಿಯವರಿಗೆ ಏನು ಕರ್ಮ ಈ ಸರ್ಕಾರ ಬೀಳಿಸಲು? ಇಬ್ಬರ ಕಾಟದಲ್ಲಿ ತಮ್ಮ ಮಗನನ್ನು ಸಿಎಂ ಮಾಡಲು ಖರ್ಗೆಯವರೇ ರಾಜ್ಯ ಸರ್ಕಾರ ಬೀಳಿಸಲು ಪ್ಲಾನ್ ಮಾಡಿದ್ದಾರೆ ಎಂದರು.
ತಂದೆ ಮಕ್ಕಳು ಕಲಬುರಗಿಯನ್ನು ರಿಪಬ್ಲಿಕ್ ಆಫ್ ಕಲಬುರಗಿಯನ್ನಾಗಿ ಮಾಡಿದ್ದಾರೆ. ನಮ್ಮ ರಾಜ್ಯಾಧ್ಯಕ್ಷರು ಅಲ್ಲಿಗೆ ಭೇಟಿ ಕೊಟ್ಟರೆ ಅವರ ಕಾರ್ಯಕರ್ತರು ದಬ್ಬಾಳಿಕೆ ಮಾಡ್ತಾರೆ ಅದಕ್ಕೆ ತಕ್ಕ ಉತ್ತರ ಕೊಡುತ್ತೇವೆ. ನಿನ್ನೆ ಜಾತಿಗಣತಿ ಬಗ್ಗೆ ತೀರ್ಮಾನ ಮಾಡುವುದಿಲ್ಲ ಎಂಬುದು ಗೊತ್ತಿತ್ತು. ಹಾಗಾಗಿ ಪಲಾಯನ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.