ಬೆಂಗಳೂರು: ಬುದ್ಧಿವಾದ ಹೇಳಿದ್ದಕ್ಕೆ ಕೆಲಸಗಾರನೊಬ್ಬ ಅಂಗಡಿಯ ಮಾಲೀಕನನ್ನೇ ಹತ್ಯೆಗೈದ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನ ಔಟರ್ ರಿಂಗ್ ರಸ್ತೆ ಬಾಳಿ ನಡೆದಿದೆ.
ಸೈಯ್ಯದ್ ಅಸ್ಲಂ (60) ಕೊಲೆಯಾದ ಟಿಂಬರ್ ಅಂಗಡಿ ಮಾಲೀಕ. ೨೩ ವರ್ಷದ ಯುವಕ ಕೊಲೆ ಆರೋಪಿ. ಸೈಯದ್ ನ ಅಂಗಡಿಯಲ್ಲಿ ಕಲೆದ ಎರಡು ವರ್ಷಗಳಿಂದ ಕೆಲಸಕ್ಕಿದ್ದ. ಸೈಯ್ಯದ್ ಮಗಳೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದ. ಇದರಿಂದ ಸೈಯದ್, ಕೆಲಸಗಾರನಿಗೆ ತಮ್ಮ ಮಗಳ ಜೊತೆ ಸಲುಗೆಯಿಂದ ಮಾತನಾಡಬೇಡ, ಸರಿಯಲ್ಲ ಎಂದು ಬುದ್ಧಿವಾದ ಹೇಳಿದ್ದಾರೆ.
ಇದೇ ಕಾರಣಕ್ಕೆ ಹಾಡಹಗಲೇ ಕಂಠ ಪೂರ್ತಿ ಕುಡಿದುಬಂದಿದ್ದ ಆರೋಪಿ, ಸೈಯ್ಯದ್ ಜೊತೆ ಜಗಳವಾಡಿದ್ದಾನೆ. ಅಂಗಡಿಯಲ್ಲಿದ್ದ ಆಯುಧದಿಂದಲೇ ಮನಬಂದಂತೆ ಹೊಡೆದು ಮಾಲೀಕನನ್ನೇ ಕೊಂದಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.