ಬೆಂಗಳೂರು : 2025-26ನೇ ಶೈಕ್ಷಣಿಕ ಸಾಲಿಗೆ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ-1ರಡಿ ರೂಪಿಸಲಾದ ಉಲ್ಲೇಖ-2ರ The Karnataka Education Institutions(Classification, Regulation and Prescription of Curricula, etc) Rules 1995 8 2-14 ರಲ್ಲಿ ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯನ್ನು ನಡೆಸಲು ಎಲ್ಲಾ ಶಾಲೆಗಳಲ್ಲಿ ಏಪ್ರಿಲ್ ತಿಂಗಳ ಪ್ರಾರಂಭದಲ್ಲಿ ಮುಂದಿನ ಶೈಕ್ಷಣಿಕ ಸಾಲಿಗೆ ಪ್ರವೇಶ ಪ್ರಕ್ರಿಯೆಗೆ ಅಧಿಸೂಚನೆಯನ್ನು ವೇಳಾಪಟ್ಟಿ ಸಹಿತ ಹೊರಡಿಸಿ, ಶಾಲೆಯಲ್ಲಿ ತರಗತಿವಾರು ಲಭ್ಯವಿರುವ ಸೀಟುಗಳು, ಸರ್ಕಾರ ನಿಗದಿಪಡಿಸಿದ ಮೀಸಲಾತಿಯಂತೆ ಸೀಟುಗಳ ವಿವರ ಮತ್ತು ತರಗತಿವಾರು ಶುಲ್ಕದ ಮಾಹಿತಿಯನ್ನು ಪ್ರಕಟಿಸುವುದು, ಅರ್ಜಿ ಸ್ವೀಕೃತಿ, ಅರ್ಜಿಗಳ ಪರಿಶೀಲನೆ, ಪ್ರವೇಶ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಪೂರೈಸುವ ಬಗ್ಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗಿರುತ್ತದೆ.
ಸಿ.ಬಿ.ಎಸ್.ಸಿ. ಐ.ಸಿ.ಎಸ್.ಇ ಪಠ್ಯಕ್ರಮದ ಶಾಲೆಗಳಿಗೆ ಸಂಬಂಧಿಸಿದಂತೆ ಆಯಾ ಮಂಡಳಿಯವರು ನೀಡಿದ ಬೈಲಾ/ನಿಯಮಗಳಲ್ಲಿ ಈ ಕೆಳಕಂಡಂತೆ ತಿಳಿಸಲಾಗಿರುತ್ತದೆ.) CBSE Bylaw 2.4.5-ADMISSION OF STUDENTS.
a) Admission in the school affiliated to the CBSE shall be made without any distinction of gender, disability, religion, race, caste, creed and place of birth etc. Reservation, if any, shall be governed by the applicable Elucation Act/Rules of the appropriate Government.
b) For the purpose of admission and extent of schools’ responsibility for Free and Compulsory Education the school shall be governed by the provisions of the Right to Children to Free and Compulsory Education Act, 2009 and the rules framed there under.
12.2 ರಲ್ಲಿ ಆಯಾ ರಾಜ್ಯ ಸರ್ಕಾರಗಳು ನೀಡುವ ನಿರ್ದೇಶನ/ಮಾರ್ಗಸೂಚಿ/ಸುತ್ತೋಲೆಗಳನ್ನು ಉಲ್ಲಂಘಿಸಿದಲ್ಲಿ ತೆಗೆದುಕೊಳ್ಳುವ ಶಿಸ್ತುಕ್ರಮದ ಬಗ್ಗೆ ವಿವರಿಸಲಾಗಿರುತ್ತದೆ.



