ಬೆಂಗಳೂರು : ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಇದೇ ಏಪ್ರಿಲ್ 16 ಮತ್ತು 17 ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ.
ಏಪ್ರಿಲ್ 16 ರಂದು ಬೆಳಿಗ್ಗೆ 10.30 ರಿಂದ 11.50 ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರವರೆಗೆ ರಸಾಯನಶಾಸ್ತ್ರ ಹಾಗೂ ಏಪ್ರಿಲ್ 17ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 11.50 ರವರೆಗೆ ಗಣಿತಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರವರೆಗೆ ಜೀವಶಾಸ್ತ್ರ ವಿಷಯದ ಪರೀಕ್ಷೆ ನಡೆಯಲಿದೆ.
· ಸಿಟಿ-2025 ರ ಪ್ರದೇಶ ಪತ್ರವನ್ನು ಮತ್ತು ಮಾನ್ಯತೆ ಇರುವ ಗುರುತಿನ ಚೀಟಿಯನ್ನು ತೋರಿಸಿದರೆ ಮಾತ್ರ ಅಭ್ಯರ್ಥಿಗಳಿಗೆ ಪರೀಕ್ಷೆಯ ಕೊಠಡಿಯನ್ನು ಪ್ರವೇಶಿಸಿ ನಿಗದಿತ ಆಸನದಲ್ಲಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗುವುದು.
ವಿ.ಸೂ: ಪ್ರಶ್ನೆ ಪತ್ರಿಕಾ ಲಕೋಟೆಯನ್ನು ತೆರೆಯಲು ಕೊಠಡಿ ಮೊಠಡಿ ಮೇಲ್ವಿಚಾರಕರು ಮಾತ್ರ ಅಧಿಕಾರವನ್ನು ಹೊಂದಿರುತ್ತಾರೆ. ಕೊಠಡಿ ಮೇಲ್ವಿಚಾರಕರನ್ನು ಹೊರತುಪಡಿಸಿ ಬೇರೆ ಯಾವುದೇ ಅಧಿಕಾರಿ / ಸಿಬ್ಬಂದಿ ವರ್ಗ ಉಪ ಮುಖ್ಯ ಪರೀಕ್ಷಾ ಅಧೀಕ್ಷಕರು / ಪ್ರಶ್ನೆ ಪತ್ರಿಕಾ ಪಾಲಕರು / ಅಧ್ಯಕ್ಷರು /ಕಾರ್ಯದರ್ಶಿ / ಆಡಳಿತಾಧಿಕಾರಿ ಮುಂತಾರವರುಗಳು ಪ್ರಶ್ನೆ ಪತ್ರಿಕಾ ಲಕೋಟೆಯನ್ನು ತೆರೆಯಲು ಅಧಿಕಾರವನ್ನು ಹೊಂದಿರುವುದಿಲ್ಲ.
ಅಭ್ಯರ್ಥಿಗಳು ಪ್ರಶ್ನೆಪತ್ರಿಕೆಯಲ್ಲಿನ ವರ್ಷನ್ ಕೋಡ ಮತ್ತು ತಾ ಸಂಖ್ಯೆಯನ್ನು ನಾಮಿನಲ್ ರೋಲ್ ನಲ್ಲಿ ಬರೆಯಬೇಕು. ನಂತರ ಕೊಠಡಿ ಮೇಲ್ವಿಚಾರಕರು ಅಭ್ಯರ್ಥಿಗಳ ಸಹಿಯನ್ನು ನಾಮಿಎಲ್ ತೋಲ್ ನಲ್ಲಿ ಪಡೆದು ಮುದ್ದಿತವಾಗಿರುವ ಸಹಿಯನ್ನು ತಾಳೆ ಮಾಡುತ್ತಾರೆ ಎಂದು ಮಾಹಿತಿ ನೀಡಿದೆ.
