ಮೈಸೂರು: ಬನ್ನೂರು ಸೇತುವೆ ಮೇಲೆ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ರಭಸಕ್ಕೆ ಮಹಿಳೆ ಸೇತುವೆ ಮೇಲಿಂದ ಕಾವೇರಿ ನದಿಗೆ ಹಾರಿ ಬಿದ್ದಿದ್ದಾರೆ.
ಮೈಸೂರು ಜಿಲ್ಲೆಯ ಟಿ.ನರಸಿಪುರ ತಾಲೂಕಿನ ಬನ್ನೂರು ಸೇತುವೆ ಮೇಲೆ ಜಾಗ್ವಾರ್ ಕಾರು, ಮಾರುತಿ ಇಕೋ ಕಾರು, ಬೈಕ್ ನಡುವೆ ಅಪಘಾತ ಸಂಭವಿಸಿದೆ. ಬೈಕ್ ಸವಾರ ಶಂಕರ್ (35) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ ನಲ್ಲಿದ್ದ ಶಂಕರ್ ತಾಯಿ ಪಾರ್ವತಿ ಕಾವೇರಿ ನದಿಗೆ ಹಾರಿ ಬಿದ್ದಿದ್ದಾರೆ. ಮೈಸೂರಿನ ಕರಕುಶಲ ನಗರದ ನಿವಾಸಿಗಳಾಗಿದ್ದಾರೆ.
ಕಾವೇರಿ ನದಿಯಲ್ಲಿ ಬಿದ್ದ ಮಹಿಳೆ ಪಾರ್ವತಿಗಾಗಿ ಸಂಜೆವರೆಗೂ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ನದಿಯಲ್ಲಿ ಶೋಧ ನಡೆಸಿದರೂ ಮಹಿಳೆ ಪತ್ತೆಯಾಗಿಲ್ಲ. ಕತ್ತಲು ಆವರಿಸಿದ್ದರಿಂದ ಶೋಧಕಾರ್ಯ ಸ್ಥಗಿತಗೊಳಿಸಲಾಗಿದೆ. ಬನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.