BIG NEWS : ನಾವ್ಯಾರೂ ಇದೇ ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡು ಹುಟ್ಟಿಲ್ಲ : DCM ಡಿಕೆ ಶಿವಕುಮಾರ್

ಬೆಂಗಳೂರು : ನಮ್ಮ ದೇಹದಲ್ಲಿ ರಕ್ತ ಇರುವವರೆಗೂ ಸಂವಿಧಾನ ಉಳಿಸುವ ಸಂಕಲ್ಪ ಮಾಡೋಣ. ಹಸಿದ ಮನೆಯಲ್ಲಿರುವವರಿಗೆ ಶಕ್ತಿ ನೀಡಿದ್ದು ಸಂವಿಧಾನ, ನಾವ್ಯಾರೂ ಇದೇ ಜಾತಿಯಲ್ಲಿ ಅರ್ಜಿ ಹಾಕಿಕೊಂಡು ಹುಟ್ಟಬೇಕೆಂದು ಹುಟ್ಟಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಭಾರತೀಯರ ಬದುಕಿಗೆ ರೂಪ ಕೊಟ್ಟಿದ್ದು ಅಂಬೇಡ್ಕರ್. ವಿಶ್ವದ ಎಲ್ಲೆಡೆ ನಮ್ಮ ಭಾರತದ ಸಂವಿಧಾನವನ್ನ ಮೆಚ್ಚಿಕೊಳ್ಳುತ್ತಾರೆ ಎಂದರೆ ಅದಕ್ಕೆ ಅಂಬೇಡ್ಕರರು ಕಾರಣ. ಎಲ್ಲ ಧರ್ಮ ಗ್ರಂಥಗಳೂ ಎಲ್ಲರ ರಕ್ಷಣೆಯೇ ಮುಖ್ಯವೆಂದಿದೆ, ಅದನ್ನೇ ಸಂವಿಧಾನವೂ ಹೇಳಿದೆ.

ಅಂಬೇಡ್ಕರ್ ಕೇವಲ ದಲಿತರಿಗಷ್ಟೇ ಅಲ್ಲ, ಭಾರತದ ಪ್ರತಿ ಪ್ರಜೆಗೂ ದೇವರ ಸ್ವರೂಪ. ಭಾರತದ ಸಂವಿಧಾನವನ್ನು ಅರ್ಪಿಸಿಕೊಂಡ ಸಂಸತ್ ನಲ್ಲಿ ಅಂಬೇಡ್ಕರ್ ಅವರಿಗೆ ಬಿಜೆಪಿ ನೇತೃತ್ವದ ಸರ್ಕಾರದ ಅಡಿಯಲ್ಲಿ ಅವಮಾನವಾಗಿದೆ ಎಂದು ನಮ್ಮ ನಾಯಕರಾದ ಶ್ರೀ ರಾಹುಲ್ ಗಾಂಧಿ ಹಾಗೂ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಸಂವಿಧಾನದ ರಕ್ಷಣೆಗಾಗಿ ಪ್ರತಿಜ್ಞೆ ಮಾಡಿ ಮುನ್ನುಡಿ ಬರೆದ ಕಾರ್ಯಕ್ರಮ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’.
ಹಸಿದ ಮನೆಯಲ್ಲಿರುವವರಿಗೆ ಶಕ್ತಿ ನೀಡಿದ್ದು ಸಂವಿಧಾನ. ನಾವ್ಯಾರೂ ಇದೇ ಜಾತಿಯಲ್ಲಿ ಅರ್ಜಿ ಹಾಕಿಕೊಂಡು ಹುಟ್ಟಬೇಕೆಂದು ಹುಟ್ಟಿಲ್ಲ. ಸತ್ತರೆ ಇತಿಹಾಸ, ಜಯಿಸಿದರೆ ಶಕ್ತಿ ಎಂದು ಅಂಬೇಡ್ಕರರು ನಂಬಿದ್ದರು. ನಾನು ಪ್ರತಿದಿನ ಅಂಬೇಡ್ಕರರನ್ನ ಸ್ಮರಿಸಿಯೇ ನನ್ನ ಕಾರ್ಯಗಳನ್ನ ಆರಂಭಿಸುತ್ತೇನೆ, ಅವರು ನನ್ನ ಜೀವನದ ಆದರ್ಶ!

ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತುಗಳನ್ನು ಉಳಿಸಿಕೊಂಡಿದೆ. ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಬೆಲೆ ಏರಿಕೆ ನಿಯಂತ್ರಣ ಮಾಡಲಾಗಿಲ್ಲ ಎಂದು, ಅದರ ವಿರುದ್ಧ ಬಡವರನ್ನು ರಕ್ಷಿಸಲೆಂದು 52 ಸಾವಿರ ಕೋಟಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡಿದೆವು. ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದಾರೆ. ರಾಜ್ಯ ಬಿಜೆಪಿ ಕೇಂದ್ರ ಸರ್ಕಾರದ ಮೇಲೆ ಜನಾಕ್ರೋಶ ಯಾತ್ರೆ ಮಾಡಬೇಕಿತ್ತು.ಏಪ್ರಿಲ್ 17ರಂದು ಫ್ರೀಡಂ ಪಾರ್ಕಿನಲ್ಲಿ ಕೇಂದ್ರದ ಬೆಲೆ ಏರಿಕೆ ಕ್ರಮದ ವಿರುದ್ಧ ಹೋರಾಟ ಹಮ್ಮಿಕೊಂಡಿದ್ದೇವೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಈ ಹೋರಾಟಕ್ಕೆ ಪ್ರೇರಣೆ. ಹೋರಾಟದ ಮೂಲಕವೇ ನಾವು ಜಯ ಸಾಧಿಸಬೇಕು ಎಂದು ಅಂಬೇಡ್ಕರರು ಹೇಳಿದ್ದರು ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read