ಬೆಂಗಳೂರು : ನಾಡಿನ ಜನತೆಗೆ ಸಿಎಂ ಸಿದ್ದರಾಮಯ್ಯ ಅವರು ‘ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ’ಯ ಶುಭಾಶಯ ಕೋರಿದ್ದಾರೆ.
ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ ‘ಶತಮಾನಗಳಿಂದ ಅವಕಾಶ ವಂಚಿತ ಸಮುದಾಯಗಳಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದ ಮೂಲಕ ಘನತೆಯಿಂದ ಬದುಕುವ ಹಕ್ಕನ್ನು ನೀಡಿದರು. ಅಂಬೇಡ್ಕರ್ ಅವರ ಹುಟ್ಟು ನಮ್ಮೆಲ್ಲರ ಹುಟ್ಟನ್ನು ಅರ್ಥಪೂರ್ಣವಾಗಿಸಿದೆ. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೂಲಕ ಜಾತ್ಯಾತೀತ ಮತ್ತು ಸಮಾಜವಾದಿ ಪ್ರಜಾಪ್ರಭುತ್ವದ ದೇಶ ಕಟ್ಟಲು ಡಾ. ಬಿ.ಆರ್ ಅಂಬೇಡ್ಕರ್ ಎಳೆದು ತಂದು ನಿಲ್ಲಿಸಿದ ವಿಮೋಚನಾ ರಥವನ್ನು ಮುಂದಕ್ಕೆ ಒಯ್ಯಲು ನಾವೆಲ್ಲ ಕೈಜೋಡಿಸೋಣ. ನಾಡಿನ ಜನತೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯ ಶುಭಾಶಯಗಳು’ ಎಂದು ಟ್ವೀಟ್ ಮಾಡಿದ್ದಾರೆ.
ಶತಮಾನಗಳಿಂದ ಅವಕಾಶ ವಂಚಿತ
— Siddaramaiah (@siddaramaiah) April 14, 2025
ಸಮುದಾಯಗಳಿಗೆ
ಬಾಬಾ ಸಾಹೇಬ್ ಅಂಬೇಡ್ಕರ್
ಸಂವಿಧಾನದ ಮೂಲಕ ಘನತೆಯಿಂದ
ಬದುಕುವ ಹಕ್ಕನ್ನು ನೀಡಿದರು.
ಅಂಬೇಡ್ಕರ್ ಅವರ ಹುಟ್ಟು
ನಮ್ಮೆಲ್ಲರ ಹುಟ್ಟನ್ನು ಅರ್ಥಪೂರ್ಣವಾಗಿಸಿದೆ.
ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೂಲಕ
ಜಾತ್ಯಾತೀತ ಮತ್ತು ಸಮಾಜವಾದಿ ಪ್ರಜಾಪ್ರಭುತ್ವದ ದೇಶ ಕಟ್ಟಲು
ಡಾ. ಬಿ.ಆರ್ ಅಂಬೇಡ್ಕರ್… pic.twitter.com/6FtUqJo5hy