ಸೋನಿಪತ್: ಓಪಿ ಜಿಂದಾಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಹಾಸ್ಟೆಲ್‌ನಲ್ಲಿ ಇತ್ತೀಚೆಗೆ ನಡೆದ ವಿಚಿತ್ರ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸೂಟ್‌ಕೇಸ್‌ನಿಂದ ಯುವತಿಯೊಬ್ಬಳು ಹೊರಬರುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದ್ದು, ಇದು ಕಾಲೇಜು ಆಡಳಿತ ಮಂಡಳಿಗೂ ತಲೆನೋವಾಗಿ ಪರಿಣಮಿಸಿತ್ತು.
ಈ ಕುರಿತು ಸ್ಪಷ್ಟನೆ ನೀಡಿರುವ ವಿಶ್ವವಿದ್ಯಾಲಯ, ಇದು ಕೆಲ ವಿದ್ಯಾರ್ಥಿನಿಯರು ಸೇರಿ ಮಾಡಿರುವ ‘ತಮಾಷೆ’ ಎಂದು ಹೇಳಿದೆ. ಆದರೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಲೇಜು, ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಹಾಸ್ಟೆಲ್‌ನೊಳಗೆ ತಮಾಷೆ ಮಾಡುತ್ತಿದ್ದ ವಿದ್ಯಾರ್ಥಿನಿಯರು, ಸೂಟ್‌ಕೇಸ್ ಅನ್ನು ಸಾರ್ವಜನಿಕ ಪ್ರದೇಶಕ್ಕೆ ತಂದಾಗ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿದ್ದಾರೆ ಎಂದು ವಿವಿ ವಕ್ತಾರರು ತಿಳಿಸಿದ್ದಾರೆ.
ವಿಡಿಯೋದಲ್ಲಿ ಇಬ್ಬರು ಮಹಿಳಾ ಭದ್ರತಾ ಸಿಬ್ಬಂದಿ ಸೂಟ್‌ಕೇಸ್ ತೆರೆದಾಗ ಅದರೊಳಗಿಂದ ಯುವತಿ ಹೊರಬರುತ್ತಿರುವುದು ಕಂಡುಬಂದಿದೆ. ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಹಲವು ಊಹಾಪೋಹಗಳು ಹರಿದಾಡಲು ಶುರುವಾಗಿದ್ದವು. ಸೂಟ್‌ಕೇಸ್ ಅನ್ನು ಹಾಸ್ಟೆಲ್‌ನ ಕಾರಿಡಾರ್‌ನಲ್ಲಿ ಸಾಗಿಸುತ್ತಿದ್ದಾಗ ಅನುಮಾನಗೊಂಡ ಭದ್ರತಾ ಸಿಬ್ಬಂದಿ ತಕ್ಷಣ ಕ್ರಮ ಕೈಗೊಂಡಿದ್ದಾರೆ.
ಈ ಘಟನೆಯಲ್ಲಿ ಭಾಗಿಯಾದ ಎಲ್ಲಾ ವಿದ್ಯಾರ್ಥಿಗಳನ್ನು ಶಿಸ್ತು ಸಮಿತಿಯ ಮುಂದೆ ಹಾಜರುಪಡಿಸಲಾಗುವುದು ಎಂದು ವಿಶ್ವವಿದ್ಯಾಲಯ ತಿಳಿಸಿದೆ. ವಿದ್ಯಾರ್ಥಿನಿಯರ ಈ ರೀತಿಯ ‘ಹುಚ್ಚಾಟ’ ಕಾಲೇಜು ಆಡಳಿತಕ್ಕೆ ಮುಜುಗರ ತಂದಿದೆ ಎನ್ನಬಹುದು.
A boy tried sneaking his girlfriend into a boy's hostel in a suitcase. Gets caught.
— Manish RJ (@mrjethwani_) April 12, 2025
Location: OP Jindal University, Haryana.
Kitne Tejaswi Log Rehtay Hai Yaha Par..😏 pic.twitter.com/isVJDGZSuk