ಅಹ್ಮದಾಬಾದ್‌ನ ಖೋಖ್ರಾ ಏರಿಯಾದಲ್ಲಿ ನಡೆದ ಬೆಂಕಿ ಅವಘಡದಲ್ಲಿ ತಾಯಿಯೊಬ್ಬರು ತೋರಿದ ಧೈರ್ಯ ನಿಜಕ್ಕೂ ಬೆರಗುಗೊಳಿಸುವಂತಿದೆ. ಪರಿಷ್ಕಾರ್ 1 ಅಪಾರ್ಟ್‌ಮೆಂಟ್‌ನ ಮೂರನೇ ಫ್ಲೋರ್‌ನಲ್ಲಿ ಬೆಂಕಿ ಕಾಣಿಸಿಕೊಂಡಾಗ, ದಟ್ಟ ಹೊಗೆಯಿಂದ ತುಂಬಿದ್ದ ಮನೆಯಲ್ಲಿ ತನ್ನಿಬ್ಬರು ಮುದ್ದು ಮಕ್ಕಳನ್ನ ಆಕೆ ಕೆಳಗಿಳಿಸಿ ಕಾಪಾಡಿದ್ದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಈ ಹೃದಯಸ್ಪರ್ಶಿ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೋಡಿದವರೆಲ್ಲಾ ಆ ತಾಯಿಯ ಕೆಚ್ಚೆದೆಯನ್ನ ಕೊಂಡಾಡ್ತಿದ್ದಾರೆ. ವಿಡಿಯೋದಲ್ಲಿ ಅಪಾರ್ಟ್‌ಮೆಂಟ್‌ನಿಂದ ದಟ್ಟವಾದ ಹೊಗೆ ಹೊರಬರ್ತಿರೋದು ಸ್ಪಷ್ಟವಾಗಿ ಕಾಣ್ತಿದೆ. ಇಂತಹ ಭಯಾನಕ ಸನ್ನಿವೇಶದಲ್ಲೂ ಆ ತಾಯಿ ಎದೆಗುಂದದೆ, ತನ್ನ ಬಾಲ್ಕನಿಯಲ್ಲಿ ನಿಂತು ಕೆಳಗಡೆ ನೆರೆಹೊರೆಯವರು ಮತ್ತೆ ಸಹಾಯಕ್ಕೆ ಬಂದಿದ್ದವರಿಗೆ ತನ್ನ ಮಕ್ಕಳನ್ನ ಒಬ್ಬೊಬ್ಬರಾಗಿ ಸುರಕ್ಷಿತವಾಗಿ ಇಳಿಸಿಕೊಟ್ಟಿದ್ದಾರೆ.
ಮಕ್ಕಳನ್ನ ರಕ್ಷಿಸುವಾಗ ಆ ತಾಯಿ ಮತ್ತೆ ಕೆಳಗಿದ್ದ ಜನ ತೋರಿದ ಸಮಯಪ್ರಜ್ಞೆ ಮತ್ತೆ ಒಬ್ಬರಿಗೊಬ್ಬರು ಸಹಾಯ ಮಾಡಿದ ರೀತಿ ನಿಜಕ್ಕೂ ಗ್ರೇಟ್. ಮಾಧ್ಯಮದ ವರದಿಗಳ ಪ್ರಕಾರ, ಈ ಬೆಂಕಿ ಅವಘಡ ಸಂಜೆ ನಾಲ್ಕು ಗಂಟೆ ಸುಮಾರಿಗೆ ಪರಿಷ್ಕಾರ್ 1 ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಲ್ಲಿ ಶುರುವಾಯ್ತು. ಆದ್ರೆ ಆ ತಾಯಿಯ ದಿಟ್ಟತನದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆಕೆಯ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರ್ತಿದೆ.
फिर तक्षशिला कांड जैसा दृश्य सामने आया।
— Sanskar Sojitra (@sanskar_sojitra) April 11, 2025
अहमदाबाद के अमराईवाड़ी में बिल्डिंग में भयानक आग,वीडियो सोशल मीडिया पर वायरल
18 से 20 लोगों को रेस्क्यू किया गया#fire #ahmedabad #firesafety #Heat
Source: @Khushi75758998 pic.twitter.com/QXWkF0Ne0R
అహ్మదాబాద్ పరిష్కార్ అపార్ట్మెంట్లో భారీ అగ్ని ప్రమాదం
— Telugu Scribe (@TeluguScribe) April 11, 2025
అగ్నిప్రమాదం నుండి తన ఇద్దరు పిల్లలను కాపాడి, ధైర్యంగా కిందకి దిగిన తల్లి
తల్లి ధైర్యానికి నెటిజన్ల ప్రశంసలు pic.twitter.com/W3026wNscM
A major fire has erupted in a building in Ahmedabad’s Khokhra area. Sending strength to those affected and hoping for a timely rescue operation.#FireIncident #ViralVideo #Ahmedabad pic.twitter.com/67NkYOKhJj
— Parimal Nathwani (@mpparimal) April 11, 2025