ಕಲಬುರಗಿ: ಪತ್ನಿಯನ್ನು ಮನೆಗೆ ಕರೆದಿದ್ದಕ್ಕೆ ಭಾವನಿಗೆ ಬಾಮೈದ ಚಾಕುವಿನಿಂದ ಇರಿದ ಘಟನೆ ಕಲಬುರಗಿ ಜಿಲ್ಲೆಯ ಗಾಜಿಪುರದಲ್ಲಿ ನಡೆದಿತ್ತು. ಹಲ್ಲೆಗೊಳಗಾಗಿದ್ದ ಭಾವ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಆನಂದ್ (29) ಮೃತ ವ್ಯಕ್ತಿ. ಆನಂದ್ ಎರದು ವರ್ಷಗಳ ಹಿಂದೆ ಸ್ನೇಹಾ ಎಂಬುವವಳನ್ನು ಪ್ರೀತಿಸಿ ವಿವಾಹವಾಗಿದ್ದ. ಮದುವೆ ಬಳಿಕ ಪತಿ-ಪತ್ನಿ ನಡುವೆ ಜಗಳ ಶುರುವಾಗಿ ಪತ್ನಿ ಸ್ನೇಹಾ ತವರು ಮನೆ ಸೇರಿದ್ದಳು. ಆನಂದ್ ತನ್ನ ಅಣ್ಣನ ಮದುವೆಯಿದೆ ಹಾಗಾಗಿ ಮನೆಗೆ ಬರುವಂತೆ ಪತ್ನಿಯನ್ನು ಮನೆಗೆ ಕರೆದಿದ್ದಾನೆ. ಇದೇ ವಿಚಾರವಾಗಿ ಭಾವ-ಬಾಮೈದನ ನಡುವೆ ಗಲಾಟೆ ನಡೆದು ಬಾಮೈದ ಟೋನಿ ಹಾಗೂ ಆತನ ಸ್ನೇಹಿತರ ಗ್ಯಾಂಗ್ ಭಾವ ಆನಂದ್ ಗೆ ಚಾಕು ಇರಿದಿದ್ದರು.
ಗಂಭೀರವಾಗಿ ಹಲ್ಲೆಗೊಳಗಾದ ಆನಂದ್ ನನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆನಂದ್ ಸಾವನ್ನಪ್ಪಿದ್ದಾರೆ.