HomeLatest NewsBIG NEWS : ಏ.17 ರಿಂದ  ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ 'ಜನಾಕ್ರೋಶ ಯಾತ್ರೆ'ಆರಂಭ ...

BIG NEWS : ಏ.17 ರಿಂದ  ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ‘ಜನಾಕ್ರೋಶ ಯಾತ್ರೆ’ಆರಂಭ : DCM ಡಿ.ಕೆ ಶಿವಕುಮಾರ್

ಬೆಂಗಳೂರು : ಏ.17 ರಿಂದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಜನಾಕ್ರೋಶ ಯಾತ್ರೆ ಆರಂಭವಾಗಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕೇಂದ್ರದ ಬೆಲೆ ಏರಿಕೆ ವಿರುದ್ಧ ಏ.17 ರಂದು ಬೆಂಗಳೂರಿನ ಪ್ರೀಡಂಪಾರ್ಕ್ ನಲ್ಲಿ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ಆರಂಭವಾಗಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಪೆಟ್ರೋಲ್, ಡೀಸೆಲ್, ಚಿನ್ನ, ಸಿಮೆಂಟ್, ಕಬ್ಬಿಣ, ಟಿವಿ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಹೆಚ್ಚಾಗಿದರಾಜ್ಯದಲ್ಲಿ ಜನಾಕ್ರೋಶ ಯಾತ್ರೆ ಮಾಡುತ್ತಿರುವ BJP ನಾಯಕರು ಕೇಂದ್ರ ಸರ್ಕಾರದ ಈ ಬೆಲೆ ಏರಿಕೆ ವಿರುದ್ಧವೂ ಮಾತನಾಡಬೇಕು, ಸತ್ಯ ಏನೆಂದು ಜನರಿಗೆ ಹೇಳಬೇಕು.ತಮ್ಮ ಹೋರಾಟದಲ್ಲಿ ತಮ್ಮ ನಾಯಕರ ಭಾವಚಿತ್ರಗಳನ್ನು ಹಾಕಿಕೊಂಡು ಅವರ ಬೆಲೆ ಏರಿಕೆ ನೀತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಬೇಕು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೇಂದ್ರ ಸರ್ಕಾರ ಯಾಕೆ ಇಂಧನ ಬೆಲೆ ಇಳಿಸಿಲ್ಲ?

ಬೆಲೆ ಏರಿಕೆ ಖಂಡಿಸಿ, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಏಪ್ರಿಲ್ 17ರಂದು ರಾಜ್ಯ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಸಲಿದ್ದೇವೆ. ರಾಜ್ಯದಲ್ಲಿ ಬಿಜೆಪಿಯವರು ಈಗಾಗಲೇ ʼಜನಾಕ್ರೋಶ ಯಾತ್ರೆʼ ನಡೆಸುತ್ತಿದ್ದಾರೆ. ಅದು ಅವರದ್ದೇ ಕೇಂದ್ರ ಸರ್ಕಾರದ ವಿರುದ್ಧ ಅವರು ನಡೆಸುತ್ತಿರುವ ಯಾತ್ರೆ. ನಮ್ಮ ಸರ್ಕಾರದ ವಿರುದ್ಧ ಪ್ರತಿಭಟಿಸಲು ಅವರಿಗೆ ಏನೂ ವಿಷಯವಿಲ್ಲ. ನಾವು ಜನರು ಬದುಕು ಕಟ್ಟಿಕೊಳ್ಳಲೆಂದು, ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದಾರೆಂದು 52 ಸಾವಿರ ಕೋಟಿ ಬಜೆಟ್ನಲ್ಲಿಟ್ಟು ಜನರಿಗೆ ಪಂಚ ಗ್ಯಾರಂಟಿಗಳ ಮೂಲಕ ಸಹಾಯ ಮಾಡುತ್ತಿದ್ದೇವೆ. ಬಿಜೆಪಿಗರ ಆಂತರಿಕ ಕಚ್ಚಾಟ, ಕೇಂದ್ರ ಸರ್ಕಾರದ ನೀತಿಗಳು ಎಲ್ಲಾ ವರ್ಗದ ಜನರಿಗೂ ಹೊಡೆತ ನೀಡಿದೆ. ಯಾವ ವರ್ಗವೂ ಇದರ ಹೊರತಾಗಿಲ್ಲ. ಇದರ ಗುಣಗಾನಗಳನ್ನು ಸಾಮಾನ್ಯ ಜನರ ಬಳಿಯೇ ಕೇಳಬೇಕು. ನಿನ್ನೆ ಕಚ್ಛಾ ತೈಲದ ಬೆಲೆ 4.3ರಷ್ಟು ಇಳಿಕೆಯಾಗಿದೆ. ಆದರೂ ಕೇಂದ್ರ ಸರ್ಕಾರ ಯಾಕೆ ಇಂಧನ ಬೆಲೆ ಇಳಿಸಿಲ್ಲ? ಪೆಟ್ರೋಲ್ ಮೂಲ ಬೆಲೆ ಪ್ರತಿ ಲೀಟರ್ಗೆ 42.60 ರೂ. ಇದೆ. ತೆರಿಗೆ ಹೆಚ್ಚಿಸಿ 103 ರೂ.ಗೆ ಮಾರಾಟ ಮಾಡಲಾಗುತ್ತಿದೆ ಎಂದರು.

ಒಂದು ಲೀಟರ್ಗೆ 60 ರೂ. ಲಾಭ ಕೇಂದ್ರಕ್ಕೆ ಸಿಗುತ್ತಿದೆ. ಡೀಸೆಲ್ ಬೆಲೆ 92 ರೂ. ಇದೆ. 43 ರೂ. ಲಾಭ ಅವರಿಗೆ ಸಿಗುತ್ತಿದೆ. ತೈಲ ಬೆಲೆಯ ಮೇಲೆ 60% ತೆರಿಗೆ ಹಾಕುತ್ತಿದ್ದಾರೆ. 43 ಲಕ್ಷ ಕೋಟಿ ರೂ. ಅವರು ಈ ಮೂಲಕ ಲೂಟಿ ಹೊಡೆಯುತ್ತಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧದ ಯಾತ್ರೆ ಎಂದು ರಾಜ್ಯ ಬಿಜೆಪಿಯವರು ಬೋರ್ಡ್ ಹಾಕಿಕೊಂಡು ಯಾತ್ರೆ ಮಾಡಬೇಕು. ನಾವು ಹಾಲಿನ ಬೆಲೆ ಏರಿಸಿದ್ದು ರೈತರ ಬದುಕು ಹಸನುಗೊಳಿಸಲು. ಕೇಂದ್ರದಿಂದ ಬೂಸಾ, ಇಂಡಿ ಬೆಲೆ ಏಕೆ ಕಡಿಮೆ ಮಾಡಿಸಲು ಆಗಿಲ್ಲ? ಕೇಂದ್ರದಿಂದಲೇ ಎಲ್ಲಾ ಬೆಲೆಯನ್ನು ಹೆಚ್ಚಿಸಿ, ಈಗ ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ನಡೆಸಿದರೆ ಅರ್ಥವಿದೆಯೇ? ನಮ್ಮಲ್ಲಿ ಹಾಲು ಪ್ರತಿ ಲೀಟರ್ಗೆ 42 ರೂ. ಇದೆ. ಆದರೆ, ಕೇರಳದಲ್ಲಿ 52, ಮಹಾರಾಷ್ಟ್ರ 52, ತೆಲಂಗಾಣ 58, ಅಸ್ಸಾಂ 60, ಹರಿಯಾಣ 56, ಮಧ್ಯಪ್ರದೇಶ 52, ಪಂಜಾಬ್ 56, ಉತ್ತರ ಪ್ರದೇಶ 56, ಗುಜರಾತ್ 53 ರೂ. ಇದೆ. ನಾವು ರೈತರ ಉಳಿಸಲಿಕ್ಕಾಗಿ ಹಾಲಿನ ಬೆಲೆ ಏರಿಸುವ ತೀರ್ಮಾನ ಕೈಗೊಂಡಿದ್ದೇವೆ ಎಂದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular