BIG NEWS : ಬೆಲೆ ಏರಿಕೆ ಖಂಡಿಸಿ ಏ. 17 ರಂದು ಕೇಂದ್ರ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ : DCM ಡಿ.ಕೆ ಶಿವಕುಮಾರ್ ಕರೆ

ಬೆಂಗಳೂರು : ಬೆಲೆ ಏರಿಕೆ ಖಂಡಿಸಿ, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಏಪ್ರಿಲ್ 17ರಂದು ರಾಜ್ಯ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಸಲಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ರಾಜ್ಯದಲ್ಲಿ ಬಿಜೆಪಿಯವರು ಈಗಾಗಲೇ ʼಜನಾಕ್ರೋಶ ಯಾತ್ರೆʼ ನಡೆಸುತ್ತಿದ್ದಾರೆ. ಅದು ಅವರದ್ದೇ ಕೇಂದ್ರ ಸರ್ಕಾರದ ವಿರುದ್ಧ ಅವರು ನಡೆಸುತ್ತಿರುವ ಯಾತ್ರೆ. ನಮ್ಮ ಸರ್ಕಾರದ ವಿರುದ್ಧ ಪ್ರತಿಭಟಿಸಲು ಅವರಿಗೆ ಏನೂ ವಿಷಯವಿಲ್ಲ. ನಾವು ಜನರು ಬದುಕು ಕಟ್ಟಿಕೊಳ್ಳಲೆಂದು, ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದಾರೆಂದು 52 ಸಾವಿರ ಕೋಟಿ ಬಜೆಟ್ನಲ್ಲಿಟ್ಟು ಜನರಿಗೆ ಪಂಚ ಗ್ಯಾರಂಟಿಗಳ ಮೂಲಕ ಸಹಾಯ ಮಾಡುತ್ತಿದ್ದೇವೆ.

ಬಿಜೆಪಿಗರ ಆಂತರಿಕ ಕಚ್ಚಾಟ, ಕೇಂದ್ರ ಸರ್ಕಾರದ ನೀತಿಗಳು ಎಲ್ಲಾ ವರ್ಗದ ಜನರಿಗೂ ಹೊಡೆತ ನೀಡಿದೆ. ಯಾವ ವರ್ಗವೂ ಇದರ ಹೊರತಾಗಿಲ್ಲ. ಇದರ ಗುಣಗಾನಗಳನ್ನು ಸಾಮಾನ್ಯ ಜನರ ಬಳಿಯೇ ಕೇಳಬೇಕು.ನಿನ್ನೆ ಕಚ್ಛಾ ತೈಲದ ಬೆಲೆ 4.3ರಷ್ಟು ಇಳಿಕೆಯಾಗಿದೆ. ಆದರೂ ಕೇಂದ್ರ ಸರ್ಕಾರ ಯಾಕೆ ಇಂಧನ ಬೆಲೆ ಇಳಿಸಿಲ್ಲ? ಪೆಟ್ರೋಲ್ ಮೂಲ ಬೆಲೆ ಪ್ರತಿ ಲೀಟರ್ಗೆ 42.60 ರೂ. ಇದೆ. ತೆರಿಗೆ ಹೆಚ್ಚಿಸಿ 103 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಒಂದು ಲೀಟರ್ಗೆ 60 ರೂ. ಲಾಭ ಕೇಂದ್ರಕ್ಕೆ ಸಿಗುತ್ತಿದೆ. ಡೀಸೆಲ್ ಬೆಲೆ 92 ರೂ. ಇದೆ. 43 ರೂ. ಲಾಭ ಅವರಿಗೆ ಸಿಗುತ್ತಿದೆ. ತೈಲ ಬೆಲೆಯ ಮೇಲೆ 60% ತೆರಿಗೆ ಹಾಕುತ್ತಿದ್ದಾರೆ. 43 ಲಕ್ಷ ಕೋಟಿ ರೂ. ಅವರು ಈ ಮೂಲಕ ಲೂಟಿ ಹೊಡೆಯುತ್ತಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧದ ಯಾತ್ರೆ ಎಂದು ರಾಜ್ಯ ಬಿಜೆಪಿಯವರು ಬೋರ್ಡ್ ಹಾಕಿಕೊಂಡು ಯಾತ್ರೆ ಮಾಡಬೇಕು.

ನಾವು ಹಾಲಿನ ಬೆಲೆ ಏರಿಸಿದ್ದು ರೈತರ ಬದುಕು ಹಸನುಗೊಳಿಸಲು. ಕೇಂದ್ರದಿಂದ ಬೂಸಾ, ಇಂಡಿ ಬೆಲೆ ಏಕೆ ಕಡಿಮೆ ಮಾಡಿಸಲು ಆಗಿಲ್ಲ? ಕೇಂದ್ರದಿಂದಲೇ ಎಲ್ಲಾ ಬೆಲೆಯನ್ನು ಹೆಚ್ಚಿಸಿ, ಈಗ ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ನಡೆಸಿದರೆ ಅರ್ಥವಿದೆಯೇ?

ನಮ್ಮಲ್ಲಿ ಹಾಲು ಪ್ರತಿ ಲೀಟರ್ಗೆ 42 ರೂ. ಇದೆ. ಆದರೆ, ಕೇರಳದಲ್ಲಿ 52, ಮಹಾರಾಷ್ಟ್ರ 52, ತೆಲಂಗಾಣ 58, ಅಸ್ಸಾಂ 60, ಹರಿಯಾಣ 56, ಮಧ್ಯಪ್ರದೇಶ 52, ಪಂಜಾಬ್ 56, ಉತ್ತರ ಪ್ರದೇಶ 56, ಗುಜರಾತ್ 53 ರೂ. ಇದೆ. ನಾವು ರೈತರ ಉಳಿಸಲಿಕ್ಕಾಗಿ ಹಾಲಿನ ಬೆಲೆ ಏರಿಸುವ ತೀರ್ಮಾನ ಕೈಗೊಂಡಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read