BIG NEWS: ಉಡುಪಿ ಕೃಷ್ಣಮಠ ರಥಬೀದಿಯಲ್ಲಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಗೆ ನಿರ್ಬಂಧ

ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ರಥ ಬೀದಿಯಲ್ಲಿ ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ದಿಂಗ್ ಫೋಟೋ ಶೂಟ್ ನಿಷೇಧಿಸಲಾಗಿದೆ.

ಈ ಬಗ್ಗೆ ಪರ್ಯಾಯ ಪುತ್ತಿಗೆ ಮಠ ಪ್ರಕಟಣೆ ಹೊರಡಿಸಿದೆ. ಶ್ರೀಕೃಷ್ಣ ಮಠ ಮಹತ್ವದ ನಿರ್ಧಾರ ಕೈಗೊಂಡಿದ್ದು, ಶ್ರೀಕೃಷ್ಣ ಮಠದ ರಥ ಬೀದಿಯಲ್ಲಿ ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ದಿಂಗ್ ಫೋಟೋ ಶೂಟ್ ಗಳಿಗೆ ನಿಷೇಧ ವಿಧಿಸಿದೆ.

ಫೋಟೋ ಶೂಟ್ ನಿಂದಾಗಿ ಸ್ವಾಮೀಜಿಗಳ ಓಡಾಟಕ್ಕೆ ಹಾಗೂ ಮುಂಜಾನೆ ಮುಜುಗರದ ಸನ್ನಿವೇಶ ಸೃಷ್ಟಿಯಾಗುತ್ತದೆ. ಇದನ್ನು ತಪ್ಪಿಸಲು ಮಠ ಈ ನಿರ್ಧಾರ ಕೈಗೊಂಡಿದೆ. ಶ್ರೀಕೃಷ್ಣಮಠ ಪಾರಂಪರಿಕ ಕಟ್ಟಡಗಳಿರುವ ತಾಣ. ಪ್ರಿ ವೆಡ್ದಿಂಗ್ ಹಾಗೂ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಹೆಸರಿನಲ್ಲಿ ಬೆಳ್ಳಂಬೆಳಿಗ್ಗೆ ಮಠದ ಆವರಣದಲ್ಲಿ ಅಸಭ್ಯ ವರ್ತನೆ ಕಾಣುತ್ತದೆ. ಫೋಟೋಶೂಠ್ ಹೆಸರಲ್ಲಿ ಮಠದ ರಥಬೀದಿಯಲ್ಲಿ ಸರಸ ಸಲ್ಲಾಪ ನಡೆಯುತ್ತಿದೆ.

ಕೇರಳ, ಬೆಂಗಳೂರು ಕಡೆಗಳಿಂದ ಬರುವಫೋಟೋಗ್ರಾಫರ್ಸ್ ಹಾವಳಿಯೂ ಹೆಚ್ಚಾಗಿದೆ ಹೀಗಾಗಿ ಮಠದ ರಥಬೀದಿಯಲ್ಲಿ ಫೋಟೋಶೂಟ್ ನಿಷೇಧಿಸಲಾಗಿದೆ.

ಅಷ್ಟಮಠಾಧೀಶರು ಓಡಾಡುವ ರಥಬೀದಿ. ನೂರಾರು ವರ್ಷಗಳಿಂದ ಯತಿಗಳು, ದಾಸರು ನಡೆದಾಡುವ ಪವಿತ್ರ ಜಾಗ. ಇದಕ್ಕೆ ಪಾವಿತ್ರ್ಯತೆ ಇದೆ. ಪ್ರತಿದಿನ ರಥಬೀದಿಯಲ್ಲಿ ದೇವರ ಉತ್ಸವ ನಡೆಯುತ್ತಿದೆ. ಇಂತಹ ಪವಿತ್ರ ಸ್ಥಳಗಳಲ್ಲಿ ಫೋಟೋಶೂಟ್, ಜೋಡಿಗಳ ಸರಸ ಸರಿಯಲ್ಲ. ಮುಜುಗರದ ಸನ್ನಿವೇಶ ತಪ್ಪಿಸಲು ಮಠ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read