ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜಗಳಗಳು ಮತ್ತು ಹೊಡೆದಾಟಗಳು ಸಾಮಾನ್ಯ ಎಂಬಂತಾಗಿದೆ. ಅದರಂತೆ, ವ್ಯಕ್ತಿಯೊಬ್ಬರು ದುಡಿಯುತ್ತಿಲ್ಲ ಎಂಬ ಕಾರಣಕ್ಕೆ ಅವರ ಪತ್ನಿ ಸಾರ್ವಜನಿಕವಾಗಿ ಕಪಾಳಕ್ಕೆ ಹೊಡೆದ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ, ಮಹಿಳೆಯೊಬ್ಬರು ತನ್ನ ಗಂಡ ಎಂದು ಹೇಳಲಾದ ವ್ಯಕ್ತಿಯನ್ನು ಕಾಲರ್ ಹಿಡಿದು ಜೋರಾಗಿ ಕೂಗಾಡುತ್ತಾ ಥಳಿಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಆ ವ್ಯಕ್ತಿ ದುಡಿಯುತ್ತಿಲ್ಲ ಮತ್ತು ಆಕೆಯ ಹಣದಲ್ಲಿ ಜೀವನ ನಡೆಸುತ್ತಿದ್ದಾನೆ ಎಂದು ಮಹಿಳೆ ಆರೋಪಿಸುತ್ತಿರುವುದು ಕೇಳಿಸುತ್ತದೆ.
ಅಂಗಡಿಯೊಂದರ ಮುಂದೆ ಈ ಘಟನೆ ನಡೆಯುತ್ತಿದ್ದು, ಸುತ್ತಲೂ ಜನ ಸೇರಿದ್ದರೂ ಯಾರೊಬ್ಬರೂ ಮಧ್ಯಪ್ರವೇಶಿಸಿ ಮಹಿಳೆಯನ್ನು ತಡೆಯಲು ಪ್ರಯತ್ನಿಸಲಿಲ್ಲ. ಅಸಹಾಯಕನಾದ ಗಂಡ ತನ್ನನ್ನು ಹೊಡೆಯದಂತೆ ಆಕೆಯ ಕೈಗಳನ್ನು ಹಿಡಿದು ಬೇಡಿಕೊಳ್ಳುತ್ತಿರುವುದು ವಿಡಿಯೊದಲ್ಲಿದೆ.
“ದುಡಿಯದ ಕಾರಣಕ್ಕೆ ಪತ್ನಿಯೊಬ್ಬಳು ಸಾರ್ವಜನಿಕವಾಗಿ ತನ್ನ ಗಂಡನನ್ನು ಥಳಿಸುತ್ತಿರುವ ಆಘಾತಕಾರಿ ವಿಡಿಯೊ” ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ನೋಡಿದ ನೆಟ್ಟಿಗರು ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಮಹಿಳೆಯ ವರ್ತನೆಯನ್ನು ಖಂಡಿಸಿದ್ದಾರೆ. ಅನೇಕರು ಇದು ಸಾರ್ವಜನಿಕ ನಿಂದನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಬ್ಬ ಬಳಕೆದಾರರು “ಏನಿದು ?! ಸಾರ್ವಜನಿಕವಾಗಿ ಅವನನ್ನು ಅವಮಾನಿಸುವ ಹಕ್ಕು ಆಕೆಗೆ ಕೊಟ್ಟವರ್ಯಾರು ?” ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು “ಹೆಂಡತಿ ಗಂಡನನ್ನು ಹೊಡೆಯುವುದು ಅಥವಾ ಹಿಂಸಿಸುವುದು ಟ್ರೆಂಡ್ ಆಗಿದೆಯೇ ?” ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಪುರುಷರ ಮೇಲಿನ ಹಿಂಸೆಯನ್ನು ಸಾಮಾನ್ಯೀಕರಿಸುವುದನ್ನು ನಿಲ್ಲಿಸಬೇಕು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ದುಡಿಯದಿರುವುದು ಅಪರಾಧವಲ್ಲ, ಆದರೆ ಸಾರ್ವಜನಿಕವಾಗಿ ಸಂಗಾತಿಯನ್ನು ಥಳಿಸುವುದು ಖಂಡಿತವಾಗಿಯೂ ಅಪರಾಧ ಎಂದು ಹಲವರು ಖಾರವಾಗಿ ನುಡಿದಿದ್ದಾರೆ.
A disturbing video shows a wife publicly Slapping her husband just because he isn’t earning
— Ghar Ke Kalesh (@gharkekalesh) April 8, 2025
pic.twitter.com/UqEJ7xITbW