ಬೆಳಗಾವಿ: ದನದ ಮೈ ತೊಳೆಯಲು ಹೋಗಿ ಬಾಲಕನೊಬ್ಬ ಮಲಪ್ರಭಾ ನದಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿದೆ.
15 ವರ್ಷದ ಮಲಕಾದಿ ವಿಠಲ ಮೃತ ಬಾಲಕ. ಬೂದಿಹಾಳ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ. ಶಾಲೆಗೆ ರಜೆ ಇದ್ದ ಕಾರಣ ಮಲಪ್ರಭಾ ನದಿಗೆ ಆಕಳಿನ ಮೈ ತೊಳೆಯಲೆಂದು ಹೋಗಿದ್ದ. ಈ ವೇಳೆ ಕಾಲು ಜಾರಿಬಿದ್ದು ಬಾಲಕ ನೀರುಪಾಲಾಗಿದ್ದಾನೆ.
ಘಟನಾ ಸ್ಥಳಕ್ಕ್ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಭೇಟಿ ನೀಡಿ, ಬಾಲಕನ ಮೃತದೇಹವನ್ನು ನದಿಯಿಂದ ಮೇಲಕೆತ್ತಿದ್ದಾರೆ.