ʼಕಿಯಾʼ ಕಾರ್ಖಾನೆಯಲ್ಲಿ ಕಳ್ಳರ ಕೈಚಳಕ : 900 ಎಂಜಿನ್‌ಗಳು ಮಾಯ !

ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಪೆನುಕೊಂಡದಲ್ಲಿರುವ ಕಿಯಾ ಮೋಟಾರ್ಸ್ ಕಾರ್ಖಾನೆಯಲ್ಲಿ ಬೃಹತ್ ಪ್ರಮಾಣದ ಕಳ್ಳತನ ಬೆಳಕಿಗೆ ಬಂದಿದೆ. ಬರೋಬ್ಬರಿ 900 ಎಂಜಿನ್‌ಗಳು ಕಾರ್ಖಾನೆಯಿಂದ ಕಳ್ಳತನವಾಗಿದ್ದು, ಈ ವಿಷಯ ತಡವಾಗಿ ಬಹಿರಂಗವಾಗಿದೆ.

ಕಿಯಾ ನಿರ್ವಹಣೆ̧ಯು ಈ ಬಗ್ಗೆ ಮಾರ್ಚ್ 19 ರಂದೇ ಪೊಲೀಸರಿಗೆ ದೂರು ನೀಡಿತ್ತು. ಆದರೆ, ಆರಂಭದಲ್ಲಿ ಯಾವುದೇ ಪ್ರಕರಣ ದಾಖಲಿಸಬಾರದೆಂದು ಮನವಿ ಮಾಡಿತ್ತು. ಈ ಷರತ್ತಿಗೆ ಪೊಲೀಸರು ಒಪ್ಪದ ಕಾರಣ, ಅಂತಿಮವಾಗಿ ಕಿಯಾ ನಿರ್ವಹಣೆಯೇ ಪ್ರಕರಣ ದಾಖಲಿಸಿದೆ. ಇದೀಗ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಉನ್ನತ ಅಧಿಕಾರಿಗಳು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ.

ಕಿಯಾ ಕಾರ್ಖಾನೆಗೆ ವಿವಿಧ ಭಾಗಗಳು ಬೇರೆ ಬೇರೆ ಕಡೆಗಳಿಂದ ಬರುತ್ತವೆ. ಎಂಜಿನ್‌ಗಳು ಮುಖ್ಯವಾಗಿ ತಮಿಳುನಾಡಿನಿಂದ ಸರಬರಾಜಾಗುತ್ತವೆ. ಈ ಎಂಜಿನ್‌ಗಳು ಸಾಗಣೆಯ ಮಾರ್ಗದಲ್ಲಿ ಕಳ್ಳತನವಾಗಿದೆಯೇ ಅಥವಾ ಕಾರ್ಖಾನೆಯ ಆವರಣದಲ್ಲೇ ಕಳ್ಳತನ ನಡೆದಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಈ ಕಳ್ಳತನವು ಕಳೆದ ಐದು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದ್ದ ಒಂದು ಸಂಘಟಿತ ಕೃತ್ಯ ಎಂದು ಪೊಲೀಸರು ಶಂಕಿಸಿದ್ದಾರೆ. 2020 ರಲ್ಲಿ ಈ ಎಂಜಿನ್ ಕಳ್ಳತನ ಪ್ರಾರಂಭವಾಯಿತು ಎಂದು ಹೇಳಲಾಗಿದೆ. ಸದ್ಯಕ್ಕೆ ತನಿಖೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಪೊಲೀಸರು ಪತ್ರಿಕಾಗೋಷ್ಠಿ ನಡೆಸಿ ಈ ಕಳ್ಳತನದ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read