ಬೆಂಗಳೂರು : ಮಹಾವೀರ ಜಯಂತಿ ಪ್ರಯುಕ್ತ ಬೆಂಗಳೂರಿನಲ್ಲಿ ಇಂದು ಮಾಂಸ ಮಾರಾಟ ಹಾಗೂ ಪ್ರಾಣಿ ವಧೆ ನಿಷೇಧಿಸಲಾಗಿದೆ.
ಮಹಾವೀರ ಜಯಂತಿ ಇರುವ ಕಾರಣ ಕಸಾಯಿಖಾನೆಯಲ್ಲಿ ಹಾಗೂ ಮಾಂಸ ಮಾರಾಟ ಮಳಿಗೆಗಳಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.
ಮಹಾವೀರ ಜಯಂತಿ
ಜೈನ ಧರ್ಮದ ಹಬ್ಬಗಳಲ್ಲಿ ಮಹಾವೀರ ಜಯಂತಿ ಮುಖ್ಯವಾದುದು. ಇದು ಕೊನೆಯ ತೀರ್ಥಂಕರನಾದ ಮಹಾವೀರನ ಜನ್ಮದಿನವನ್ನು ಆಚರಿಸುತ್ತದೆ. ಮಹಾವೀರ ಜನಿಸಿದ್ದು ಚೈತ್ರ ಮಾಸದ ಶುಕ್ಲ ತ್ರಯೋದಶಿಯಂದು. ವರ್ಷ ಕ್ರಿ.ಪೂ. ೫೯೯ ಅಥವಾ ಕ್ರಿ.ಪೂ. ೬೧೫.ಮಹಾವೀರನು ಗನರಾಜ್ಯ ಎಂಬ ರಾಜ್ಯದಲ್ಲಿ ಜನಿಸಿದರು. ವಿಜ್ಜಿ ಎಂಬ ರಾಜನು ಆ ಸಮಯದಲ್ಲಿ ಆಳ್ವಿಕೆಯನ್ನು ಮಾಡುತ್ತಿದ್ದನು. ಮಹಾವೀರ ಜಯಂತಿಯಂದು ಜೈನ ಬಸದಿಗಳನ್ನು ಬಾವುಟಗಳಿಂದ ಅಲಂಕರಿಸಲಾಗುತ್ತದೆ. ಬೆಳಗಿನ ಸಮಯ ಮಹಾವೀರನ ಪ್ರತಿಮೆಗೆ ಅಭಿಷೇಕ ಮಾಡಲಾಗುತ್ತದೆ. ನಂತರ ಇದನ್ನು ತೊಟ್ಟಿಲಿನಲ್ಲಿಟ್ಟು ಮೆರವಣಿಗೆ ಕರೆದೊಯ್ಯಲಾಗುತ್ತದೆ. ಭಕ್ತಾದಿಗಳು ಅಕ್ಕಿ, ಹಣ್ಣು, ಹಾಲು, ನೀರು ಮೊದಲಾದುವನ್ನು ನೈವೇದ್ಯ ಮಾಡುತ್ತಾರೆ.