ಬೆಂಗಳೂರು : ಪೌರಕಾರ್ಮಿಕರ ಕಲ್ಯಾಣಕ್ಕಾಗಿ 730 ಕೋಟಿ ಮೀಸಲಿಡಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ.
ಬಿಬಿಎಂಪಿ ಬಜೆಟ್ನಲ್ಲಿ ಕಾರ್ಮಿಕರ ವೇತನಕ್ಕೆ ₹500 ಕೋಟಿ ಘೋಷಣೆ ಮಾಡಲಾಗಿದೆ. ₹107 ಕೋಟಿ ಪಿಂಚಣಿಗೆ, ಮೃತಪಟ್ಟವರ ಹೆಸರಿನಲ್ಲಿ ₹10 ಲಕ್ಷ ಮೀಸಲಿಡಲಾಗಿದೆ. ₹6 ಸಾವಿರ ಪಿಂಚಣಿ ನೀಡುವ ಯೋಜನೆ ಜಾರಿಗೆ ತರಲಾಗಿದೆ. ಒಟ್ಟಿನಲ್ಲಿ ಪೌರಕಾರ್ಮಿಕರಿಗಾಗಿಯೇ ಬಿಬಿಎಂಪಿಯಿಂದ ₹730 ಕೋಟಿ ಮೀಸಲಿಟ್ಟಿದ್ದೇವೆ ಎಂದು ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.
https://twitter.com/KarnatakaVarthe/status/1909520996740268447