ಜೈಪುರದ ನಹರ್ಗಢ್ ಪ್ರದೇಶದಲ್ಲಿ ಸೋಮವಾರ ಸಂಜೆ ಕಾರೊಂದು ಅನೇಕ ವಾಹನಗಳು ಮತ್ತು ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಾಲಕ ಕುಡಿದು ಕಾರು ಚಲಾಯಿಸಿದ್ದಾನೆ ಎಂದು ಹೇಳಲಾಗುತ್ತಿದೆ. ನಹರ್ಗಢ ಪ್ರದೇಶದಿಂದ ಹಿಟ್ ಅಂಡ್ ರನ್ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಎಸ್ಎಂಎಸ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕನ್ಹಯ್ಯಾಲಾಲ್ ತಿಳಿಸಿದ್ದಾರೆ.
ಕಿರಿದಾದ ಬೀದಿಯಲ್ಲಿ ವೇಗವಾಗಿ ಚಲಿಸುವಾಗ ಎಸ್ ಯುವಿ ನಿಯಂತ್ರಣ ತಪ್ಪಿದ ಘಟನೆಯನ್ನು ಸಿಸಿಟಿವಿ ದೃಶ್ಯಾವಳಿಗಳು ಸೆರೆಹಿಡಿದಿವೆ. ವಾಹನಕ್ಕೆ ಡಿಕ್ಕಿ ಹೊಡೆದ ನಂತರ ಹಲವು ಬೈಕ್ ಸವಾರರು ರಸ್ತೆಗೆ ಬಿದ್ದಿದ್ದಾರೆ ಮತ್ತು ಹಲವು ವಾಹನಗಳು ಜಖಂ ಆಗಿದೆ. ಘಟನೆ ಬಳಿಕ ಚಾಲಕ ಉಸ್ಮಾನ್ ನನ್ನು ಸ್ಥಳೀಯರು ಬೆನ್ನಟ್ಟಿದ್ದು, ಈಗ ಪೊಲೀಸ್ ವಶದಲ್ಲಿದ್ದಾನೆ ಎಂದು ವರದಿಯಾಗಿದೆ.
Jaipur, Rajasthan: CCTV footage has captured a hit-and-run incident where a speeding vehicle mowed down several people, killing two and injuring eight. The driver, Usman, is in police custody. pic.twitter.com/8rDBJm3KSf
— IANS (@ians_india) April 7, 2025