KIA ಪ್ರಯಾಣಿಕರ ಸಂಖ್ಯೆ ಭಾರಿ ಏರಿಕೆ: 4.18 ಕೋಟಿ ಜನ ಪ್ರಯಾಣ

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(KIA) ಪ್ರಯಾಣಿಕರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 2024- 25 ನೇ ಸಾಲಿನಲ್ಲಿ 4.18 ಕೋಟಿ ಜನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸೇವೆ ಪಡೆದುಕೊಂಡಿದ್ದಾರೆ.

ಈ ವಿಮಾನ ನಿಲ್ದಾಣದಲ್ಲಿ ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿದೆ. 2023- 24ನೇ ಸಾಲಿನಲ್ಲಿ 3.75 ಕೋಟಿ ಜನ ಈ ನಿಲ್ದಾಣದಿಂದ ವಿಮಾನಯಾನ ಸೇವೆ ಪಡೆದುಕೊಂಡಿದ್ದಾರೆ. 2024 -25 ರಲ್ಲಿ 4.18 ಕೋಟಿ ಪ್ರಯಾಣಿಕರು ವಿಮಾನಯಾನ ಸೇವೆ ಪಡೆದುಕೊಂಡಿದ್ದು, ಇವರಲ್ಲಿ 3.60 ಕೋಟಿ ದೇಶೀಯ ಪ್ರಯಾಣಿಕರು, 58.3 ಲಕ್ಷ ಅಂತರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸರಕು ಸಾಗಣೆ ಪ್ರಮಾಣ ಕೂಡ ಹೆಚ್ಚಾಗಿದೆ. 2024 -25 ರಲ್ಲಿ 5.02 ಟನ್ ಸರಕು ಸಾಗಣೆ ಮಾಡಲಾಗಿದೆ. ಇದರಲ್ಲಿ ಅಂತರರಾಷ್ಟ್ರೀಯ ಸರಕು ಸಾಗಣೆ ಹೆಚ್ಚಾಗಿದೆ. ದೇಶದ ವಿವಿಧ ನಗರಗಳಿಗೆ 1.81 ಟನ್ ಸರಕು ಕಳುಹಿಸಲಾಗಿದೆ. ಈ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದೇಶದಲ್ಲಿಯೇ ಬೇಗ ಹಾಳಾಗುವ ವಸ್ತುಗಳ ರಫ್ತಿನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read