ಬೆಳಗಾವಿ: ಬೆಳಗಾವಿಯಿಂದಲೇ ಮೊದಲು ನಾವು ಹೋರಾಟ ಆರಂಭಿಸಿ ಯಶಸ್ವಿ ಆಗಿದ್ದೆವು. ಈಗಲೂ ನಾವು ಬೆಳಗಾವಿ ನೆಲದಿಂದಲೇ ಹೋರಾಟ ಆರಂಭಿಸುತ್ತೇವೆ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾಅತನಾಡಿದ ಯತ್ನಾಳ್, ಬೆಳವಡಿಮಲ್ಲಮ್ಮ, ಕಿತ್ತೂರು ಚನ್ನಮ್ಮ ಸಂಗೊಳ್ಳಿ ರಾಯಣ್ಣ ಎಲ್ಲಾ ಕ್ರಾಂತಿವೀರರ ಪುಣ್ಯಭೂಮಿ ಬೆಳಗಾವಿ. ಹಾಗಾಗಿ ಇಲ್ಲಿಂದಲೇ ನಮ್ಮ ಹೋರಟ ಆರಂಭವಾಗಲಿದೆ. ನಾವು ಮೊದಲು ಪಕ್ಷ ನಿಷ್ಠಾವಂತರು ಇಲ್ಲೇ ಸಭೆ ಮಾಡಿದ್ದೆವು. ಈಗ ಉಚ್ಛಾಟನೆ ಮಾಡಿರಬಹುದು ಇನ್ನು ಸ್ವಲ್ಪ ದಿನದಲ್ಲಿ ಅವರನ್ನೂ ಉಚ್ಛಾಟನೆ ಮಾಡುವ ಕಾಲ ಬರುತ್ತೆದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಹೈಕಮಾಂಡ್ ಅವರನ್ನು ತಲೆ ಮೇಲೆ ಕೂರಿಸಿಕೊಂಡಿರಬಹುದು. ಆದರೆ ಜನರು ಅವರನ್ನು ತಲೆ ಮೇರೆ ಕೂರಿಸಿಕೊಳ್ಳಲ್ಲ. ಜನರಿಂದಲೇ ಉಚ್ಛಾಟನೆ ಆಗಲಿದ್ದಾರೆ ಎಂದು ಗುಡುಗಿದರು.
ಇನ್ನು ಬಿಜೆಪಿಗೆ ಮರುಳುವ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ್, ಈ ಕುಟುಂಬ ರಾಜಕಾರಣದಿಂದ ಬಿಜೆಪಿ ಹೊರಬರುವರೆಗೂ ನಾನು ಬಿಜೆಪಿಗೆ ಮತ್ತೆ ಹೋಗಲ್ಲ. ವಿಜಯೆಂದ್ರನನ್ನು ಸಿಎಂ ಮಾಡಲು ನಾವು ಮತ್ತೆ ಬಿಜೆಪಿಗೆ ಹೋಗಬೇಕಾ? ಅಥವಾ ವಿಜಯೇಂದ್ರ ಮಗನನ್ನು, ಬಿ.ವೈ. ರಾಘವೇಂದ್ರನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲು ಹೋಗಬೇಕಾ? ವಂಶಪಾರಂಪರ್ಯ, ಭ್ರಷ್ಟಾಚಾರ ರಾಜಕಾರಣ ಬಿಜೆಪಿಯಲ್ಲಿ ನಡೆಯಲ್ಲ ಎಂದು ಈ ಹಿಂದೆ ಪ್ರಧಾನಿಗಳು ಹೇಳಿದ್ದರು. ಅದನ್ನು ಮೊದಲು ಕರ್ನಾಟಕದಲ್ಲಿ ಮಾಡಿ ತೋರಿಸಲಿ ಆಮೇಲೆ ನೋಡೋಣ ಎಂದರು.