ಬೆಂಗಳೂರು : ಬೆಂಗಳೂರಿಗರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ‘ಆಸ್ತಿ ತೆರಿಗೆ’ ಜೊತೆ ‘ತ್ಯಾಜ್ಯ ಶುಲ್ಕ’ ವಸೂಲಿ ಮಾಡುವಂತೆ ಬಿಬಿಎಂಪಿ ಆದೇಶ ಹೊರಡಿಸಿದೆ.
ಏನಿದೆ ಆದೇಶದಲ್ಲಿ..?
ಸರ್ಕಾರವು ಗೃಹ, ವಾಣಿಜ್ಯ, ಸಾಂಸ್ಮಿಕ ಮತ್ತು ಬೃಹತ್ ತ್ಯಾಜ್ಯ ಉತ್ಪಾದಕರಿಂದ ಬಳಕೆದಾರರ ಶುಲ್ಕ(ಸೇವಾ ಶುಲ್ಕ)ವನ್ನು ಸಂಗ್ರಹಿಸಲು ಉಲ್ಲೇಖ (01) ರನ್ವಯ ಅನುಮೋದನೆಯನ್ನು ನೀಡಿದ್ದು ಅನುಷ್ಠಾನದಲ್ಲಿನ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಂಡ ನಿರ್ಣಯಗಳಿಗೆ ಅನುಮೋದನೆಯನ್ನು ನೀಡಿರುತ್ತದೆ.
ಅದರಂತೆ ಗೃಹ, ವಾಣಿಜ್ಯ ಮತ್ತು ಸಾಂಸ್ಥಿಕ ತ್ಯಾಜ್ಯ ಉತ್ಪಾದಕರಿಂದ ಘನತ್ಯಾಜ್ಯ ನಿರ್ವಹಣಾ ಬಳಕೆದಾರರ ಶುಲ್ಕ (ಸೇವಾ ಶುಲ್ಕ)ವನ್ನು ದಿನಾಂಕ: 01.04.2025 ರಿಂದ ಅನ್ವಯವಾಗುವಂತೆ ಸಂಗ್ರಹಿಸಲು ಮತ್ತು ಉಲ್ಲೇಖ (01) ರಲ್ಲಿರುವಂತೆ ಶುಲ್ಕದ ವಾರ್ಷಿಕ ವೃದ್ಧಿಯನ್ನು 2026-27ನೇ ಸಾಲಿನಿಂದ ಅನುಷ್ಠಾನಗೊಳಿಸಲು ಉಲ್ಲೇಖ (5) ರಂತೆ ಮಾನ್ಯ ಆಡಳಿತಗಾರರು ಅನುಮೋದನ ನೀಡಿರುತ್ತಾರೆ.
ಆದುದರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2025-26ನೇ ಆರ್ಥಿಕ ಸಾಲಿನಿಂದ ಘನತ್ಯಾಜ್ಯ ನಿರ್ವಹಣಾ ಬಳಕೆದಾರರ/ಸೇವಾ ಶುಲ್ಕ (SWM User Fee) ವನ್ನು ಆಸ್ತಿ ತೆರಿಗೆ ಜೊತೆಯಲ್ಲಿ ಕೆಳಕಂಡಂತೆ ನಿಗಧಿಪಡಿಸಿ ಸಂಗ್ರಹಿಸುವಂತೆ ಆದೇಶಿಸಿದೆ.



