BREAKING: ಜಮೀನಿಗಾಗಿ 2 ಗುಂಪುಗಳ ನಡುವೆ ಮಾರಾಮಾರಿ: ಫ್ಯಾಕ್ಟರಿ ಸಿಬ್ಬಂದಿ ಹಾಗೂ ಸ್ಥಳೀಯರ ನಡುವೆ ಹೊಡೆದಾಟ

ಬೆಳಗಾವಿ: ಆರುವರೆ ಎಕರೆ ಜಮೀನಿಗಾಗಿ ಎರಡು ಗುಂಪುಗಳ ನಡುವೆಯೇ ಮಾರಾಮಾರಿ ನಡೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ವಿದ್ಯಾನಗರದಲ್ಲಿ ನಡೆದಿದೆ.

ಸೆರಾಮಿಕ್ಸ್ ಫ್ಯಾಕ್ಟರಿ ಸಿಬ್ಬಂದಿ ಹಾಗೂ ಸ್ಥಳೀಯರ ನಡುವೆ ಜಮೀನಿಗಾಗಿ ಹೊಡೆದಾಟ ನಡೆದಿದ್ದು, ಘಟನೆಯಲ್ಲಿ 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಇಬ್ಬರ ಸ್ಥಿತಿ ಗಂಭೀರವಾಗಿದೆ.

ಆರುವರೆ ಎಕರೆ ಜಮೀನು ಫ್ಯಾಕ್ಟರಿಗೆ ಸೇರಿದ ಜಾಗ ಇದು ತಮಗೆ ಸೇರಿದ್ದು ಎಂದು ಫ್ಯಾಕ್ಟರಿ ಸಿಬ್ಬಂದಿ ಜೆಸಿಬಿ ತಂದು ಜಾಗವನ್ನು ನಿವೇಶನ ಮಾಡಿಕೊಂಡು ಹಂಚಿಕೊಳ್ಳಲು ಮುಂದಾಗಿದ್ದರು. ಈ ವೇಳೆ ಖಾನಾಪುರದ ಶಹಾಪುರ ನಿವಾಸಿಗಳು ಈ ಜಾಗ ಕಾರ್ಖಾನೆಗೆ ಸೇರಿದ್ದಲ್ಲ ತಮ್ಮದೆಂದು ಕಾರ್ಖಾನೆ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದು, ನೂರಾರು ಜನರ ನಡುವೆ ಮಾರಾಮಾರಿ ನಡೆದಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read