ಕನ್ಹಯ್ಯ ಕುಮಾರ್ ದೇಗುಲ ಭೇಟಿ ಬಳಿಕ ಗಂಗಾಜಲದಿಂದ ಶುದ್ಧೀಕರಣ : ಬಿಹಾರದಲ್ಲಿ ಹೊಸ ವಿವಾದ !

ಪಾಟ್ನಾ (ಬಿಹಾರ): ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್ ಭೇಟಿ ನೀಡಿದ ನಂತರ ದೇವಾಲಯವನ್ನು ಗಂಗಾಜಲದಿಂದ ಶುದ್ಧೀಕರಿಸಿದ ಘಟನೆ ವಿವಾದಕ್ಕೆ ಕಾರಣವಾಗಿದೆ.

ಈ ಘಟನೆ ಬಿಹಾರದ ಸಹರ್ಸಾ ಜಿಲ್ಲೆಯ ಬಂಗಾವ್‌ನಲ್ಲಿರುವ ಭಗವತಿ ಸ್ತಾನ್ ದುರ್ಗಾ ದೇವಾಲಯದಲ್ಲಿ ನಡೆದಿದೆ. “ವಲಸೆ ನಿಲ್ಲಿಸಿ, ಉದ್ಯೋಗ ನೀಡಿ” ಎಂಬ ಘೋಷಣೆಯೊಂದಿಗೆ ಕನ್ಹಯ್ಯ ಕುಮಾರ್ ಪ್ರಸ್ತುತ ಬಿಹಾರದಲ್ಲಿ ರ್ಯಾಲಿಗಳನ್ನು ನಡೆಸುತ್ತಿದ್ದಾರೆ.

ಬಿಹಾರದಲ್ಲಿನ ರ್ಯಾಲಿಯ ವೇಳೆ, ಮಂಗಳವಾರ ರಾತ್ರಿ ಕನ್ಹಯ್ಯ ದೇವಾಲಯಕ್ಕೆ ಭೇಟಿ ನೀಡಿದ್ದರು. ಅವರು ದೇವಾಲಯದ ಆವರಣದಿಂದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಮರುದಿನ, ಒಂದು ಗುಂಪು ಮಂಟಪವನ್ನು ಸ್ವಚ್ಛಗೊಳಿಸಿದ. ನಗರ ಪಂಚಾಯತ್ ಅಡಿಯಲ್ಲಿ ಬಂಗಾವ್ ವಾರ್ಡ್‌ನ ಕೌನ್ಸಿಲರ್ ಅಮಿತ್ ಚೌಧರಿ ಅವರು ಸ್ವಚ್ಛಗೊಳಿಸುವಿಕೆಗೆ ನೇತೃತ್ವ ವಹಿಸಿದ್ದರು. ಪ್ರದೇಶವನ್ನು ಶುದ್ಧೀಕರಿಸಲು ಗಂಗಾಜಲವನ್ನು ಬಳಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಕನ್ಹಯ್ಯ ಕುಮಾರ್ ರಾಷ್ಟ್ರದ ವಿರುದ್ಧ ಮಾತನಾಡಿದ್ದಾರೆ ಮತ್ತು ಅವರು ದೇವಾಲಯದ ಗರ್ಭಗುಡಿಯಿಂದ ಭಾಷಣ ಮಾಡಿದ್ದಾರೆ ಎಂದು ಗುಂಪು ಹೇಳಿಕೊಂಡಿದೆ. ದೇವಾಲಯವನ್ನು ಶುದ್ಧೀಕರಿಸುವ ದೃಶ್ಯಗಳು ಹೊರಬಂದಿವೆ. ಈ ವಿವಾದಕ್ಕೆ ಕನ್ಹಯ್ಯ ಕುಮಾರ್ ಇನ್ನೂ ಪ್ರತಿಕ್ರಿಯಿಸದಿದ್ದರೂ, ಕಾಂಗ್ರೆಸ್ ಪಕ್ಷ ಈ ಕೃತ್ಯವನ್ನು ಖಂಡಿಸಿದೆ.

ಬಿಹಾರದಲ್ಲಿ ಶೀಘ್ರದಲ್ಲೇ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಕಾರಣ, ಈ ಘಟನೆ ರಾಜ್ಯದಲ್ಲಿ ಹೊಸ ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read