ಕಾಲುವೆಗೆ ಬಿದ್ದ ಯುವತಿ ರಕ್ಷಣೆ ; ಪೊಲೀಸರ ಸಾಹಸಕ್ಕೆ ಸೆಲ್ಯೂಟ್ | Watch Video

ಉತ್ತರಾಖಂಡದ ರೂರ್ಕಿಯಲ್ಲಿ ಕಾಲುವೆಗೆ ಬಿದ್ದ ಯುವತಿಯನ್ನ ಪೊಲೀಸರು ರಕ್ಷಣೆ ಮಾಡಿದ ವಿಡಿಯೋ ವೈರಲ್ ಆಗಿದೆ. ಸುಮಾರು ಒಂದೂವರೆ ನಿಮಿಷದ ಈ ವಿಡಿಯೋದಲ್ಲಿ, ಯುವತಿ ಕಾಲುವೆಗೆ ಬಿದ್ದ ತಕ್ಷಣ ಪೊಲೀಸರು ಓಡಿ ಹೋಗಿ ರಕ್ಷಣೆ ಮಾಡ್ತಾರೆ.

ಹರಿದ್ವಾರ ಜಿಲ್ಲೆಯ ರೂರ್ಕಿಯಲ್ಲಿ ಈ ಘಟನೆ ನಡೆದಿದೆ. ಎಂಎ ವಿದ್ಯಾರ್ಥಿನಿಯಾಗಿದ್ದ ಯುವತಿ ಮಾನಸಿಕ ಒತ್ತಡದಿಂದ ಕಾಲುವೆಗೆ ಹಾರಿದ್ದಾರೆ ಎಂದು ಹೇಳಲಾಗುತ್ತಿದೆ. ಆಕೆ ಕಾಲುವೆಗೆ ಹಾರಿದಾಗ, ಅಲ್ಲಿನ ಜನರು ಜೋರಾಗಿ ಕೂಗಿ ಸಹಾಯ ಕೇಳಿದ್ದಾರೆ. “ರೂರ್ಕಿ ಹಾಕ್ 14” ತಂಡದ ಭಾಗವಾಗಿ ಗಸ್ತು ತಿರುಗುತ್ತಿದ್ದ ಹೆಚ್ಚುವರಿ ಸಬ್ ಇನ್ಸ್‌ಪೆಕ್ಟರ್ ಮನೋಜ್ ಶರ್ಮಾ ಮತ್ತು ಹೆಡ್ ಕಾನ್‌ಸ್ಟೆಬಲ್ ಕೃಪಾ ರಾಮ್ ತಕ್ಷಣ ಕಾಲುವೆಯ ಕಡೆಗೆ ಓಡಿ ಹೋಗಿ ಆಕೆಯನ್ನ ರಕ್ಷಣೆ ಮಾಡಿದ್ದಾರೆ.

ಮಹಿಳೆಯನ್ನ ಪ್ರಜ್ಞಾಹೀನ ಸ್ಥಿತಿಯಲ್ಲಿ ನೀರಿನಿಂದ ಹೊರತೆಗೆಯಲಾಗಿದೆ. ಇಬ್ಬರು ಪೊಲೀಸರು ಪ್ರಾಥಮಿಕ ಚಿಕಿತ್ಸೆ ನೀಡಿ, ಆಕೆಯ ಹೊಟ್ಟೆಯಲ್ಲಿದ್ದ ನೀರನ್ನ ಹೊರತೆಗೆದು, ಸಿವಿಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈಗ ಆಕೆ ಚಿಕಿತ್ಸೆ ಪಡೆಯುತ್ತಿದ್ದಾರೆ, ಆಕೆಯ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ.

ಪೊಲೀಸ್ ಅಧಿಕಾರಿಗಳ ಧೈರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉತ್ತರಾಖಂಡ ಪೊಲೀಸರು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ವಿಡಿಯೋ ಹಂಚಿಕೊಂಡು, “ಈ ಧೈರ್ಯಶಾಲಿ ಕೃತ್ಯವು ಪೊಲೀಸ್ ಕರ್ತವ್ಯ ಮತ್ತು ಮಾನವೀಯತೆಗೆ ಉದಾಹರಣೆಯಾಗಿದೆ. ನಗರ ಪೊಲೀಸ್ ಘಟಕದ (ಸಿಪಿಯು) ಸಿಬ್ಬಂದಿಯನ್ನ ಸ್ಥಳೀಯರು ಶ್ಲಾಘಿಸಿದ್ದಾರೆ” ಎಂದು ಹೇಳಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read