ʼಕಾಮಾʼ ಹಾಕಲು ಮರೆತಿದ್ದಕ್ಕೆ ಕೈತಪ್ಪಿದ ಉದ್ಯೋಗ ; ಡೇಟಾ ಇಂಜಿನಿಯರ್ ವ್ಯಥೆಯ ಕಥೆ ವೈರಲ್ !

ಒಂದು ಸಣ್ಣ ತಪ್ಪಿನಿಂದ ಡೇಟಾ ಇಂಜಿನಿಯರ್ ಒಬ್ಬರು ಉದ್ಯೋಗವನ್ನೇ ಕಳೆದುಕೊಂಡಿದ್ದಾರೆ. ಈ ಕಥೆ ರೆಡ್ಡಿಟ್‌ನಲ್ಲಿ ಸಖತ್ ವೈರಲ್ ಆಗಿದೆ.

ರೆಡ್ಡಿಟ್ ಯೂಸರ್ ಒಬ್ಬರು “ಪ್ರಮಾಣ” ಅನ್ನೋ ಕಂಪನಿಯಲ್ಲಿ ಡೇಟಾ ಇಂಜಿನಿಯರ್ ಕೆಲಸಕ್ಕೆ ಇಂಟರ್ವ್ಯೂಗೆ ಹೋಗಿದ್ರು. ಮೊದಲ ರೌಂಡ್ ಪಾಸ್ ಆದ್ರು. ಎರಡನೇ ರೌಂಡ್‌ನಲ್ಲಿ ನೋಟ್‌ಪ್ಯಾಡ್‌ನಲ್ಲಿ ಎಸ್‌ಕ್ಯೂಎಲ್ ಪ್ರಶ್ನೆ ಬರೆಯುವಾಗ ಎರಡು ಕಾಲಮ್ ಹೆಸರುಗಳ ನಡುವೆ ಕಾಮಾ ಹಾಕೋದು ಮರೆತಿದ್ರು.

ಕಂಪನಿಯವರು ಈ ಸಣ್ಣ ತಪ್ಪಿನಿಂದ ಅವರನ್ನ ರಿಜೆಕ್ಟ್ ಮಾಡಿದ್ರು. ಉಳಿದೆಲ್ಲಾ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಕೊಟ್ಟರೂ, ಇಂಟರ್ವ್ಯೂ ಮಾಡಿದವರು 20 ನಿಮಿಷ ಈ ತಪ್ಪಿನ ಬಗ್ಗೆನೇ ಮಾತಾಡಿದ್ರು. ಅವರು ಎಐ ಟೂಲ್ಸ್, ಐಡಿಇಗಳನ್ನ ಜಾಸ್ತಿ ಯೂಸ್ ಮಾಡ್ತಾರೆ ಅಂತ ಆರೋಪ ಮಾಡಿದ್ರು. ಆ ಅಭ್ಯರ್ಥಿ ಗ್ರಾಹಕ ಡೇಟಾ ಪ್ಲಾಟ್‌ಫಾರ್ಮ್‌ನಲ್ಲಿ ಎಕ್ಸ್‌ಪೀರಿಯನ್ಸ್ ಹೊಂದಿದ್ರೂ, ಇಂಟರ್ವ್ಯೂ ಮಾಡಿದವರು ಅದನ್ನ ಕನ್ಸಿಡರ್ ಮಾಡ್ಲಿಲ್ಲ.

“ನಾನು ಎಲ್ಲಾ ಪ್ರಶ್ನೆಗಳಿಗೂ ಕರೆಕ್ಟ್ ಆನ್ಸರ್ ಮಾಡಿದ್ದೆ. ನೋಟ್‌ಪ್ಯಾಡ್‌ನಲ್ಲಿ ಎಸ್‌ಕ್ಯೂಎಲ್ ಪ್ರಶ್ನೆ ಬರೆಯುವಾಗ ಎರಡು ಕಾಲಮ್ ಹೆಸರುಗಳ ನಡುವೆ ಕಾಮಾ ಹಾಕೋದು ಮರೆತಿದ್ದೆ” ಅಂತ ಆ ಯೂಸರ್ ರೆಡ್ಡಿಟ್‌ನಲ್ಲಿ ಬರೆದಿದ್ದಾರೆ. “ನನಗೆ ನಾಲೆಡ್ಜ್ ಕಮ್ಮಿ ಇರ್ಲಿಲ್ಲ, ಇದು ಸಿಂಪಲ್ ಮಿಸ್ಟೇಕ್. ಆದ್ರೆ ಇದರಿಂದ ನನಗೆ ಕೆಲಸನೇ ಸಿಗಲಿಲ್ಲ” ಅಂತ ಅವರು ಹೇಳಿದ್ದಾರೆ.

ಈ ಪೋಸ್ಟ್ ರೆಡ್ಡಿಟ್‌ನಲ್ಲಿ ವೈರಲ್ ಆದ ನಂತರ ನೆಟಿಜನ್‌ಗಳು ಬೇರೆ ಬೇರೆ ರೀತಿ ರಿಯಾಕ್ಷನ್ ಕೊಟ್ಟಿದ್ದಾರೆ:

  • “ಅವರು ನಿಮ್ಮನ್ನ ರಿಜೆಕ್ಟ್ ಮಾಡೋಕೆ ಏನಾದ್ರೂ ಸಿಲ್ಲಿ ರೀಸನ್ಸ್ ಹುಡುಕ್ತಾರೆ. ನೀವು ಅನಾವಶ್ಯಕ ಟೆನ್ಷನ್ ಇಂದ ಪಾರಾಗಿದ್ದೀರಿ” ಅಂತ ಒಬ್ಬರು ಹೇಳಿದ್ದಾರೆ.
  • “ನೀವು ಆ ಕಂಪನಿ ಸೇರಿಕೊಂಡಿದ್ರೆ ಇಂತಹವರ ಜೊತೆ ಕೆಲಸ ಮಾಡೋದು ಎಷ್ಟು ಕಷ್ಟ ಆಗ್ತಿತ್ತು ಅಂತ ಇಮ್ಯಾಜಿನ್ ಮಾಡಿ. ನಿಮಗೆ ಅದೃಷ್ಟ ಇದೆ” ಅಂತ ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
  • ರೆಡ್ಡಿಟ್ ಯೂಸರ್ ಒಬ್ಬರು ಜಾಬ್ ಮಾರ್ಕೆಟ್ “ಜೋಕ್” ಅಂತ ಹೇಳಿದ್ದಾರೆ.

Got Rejected Over a Missing Comma – This Market Is a Joke
byu/IntrovertCheesecake indevelopersIndia

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read