ನಮ್ಮ ಸೌಂದರ್ಯದ ಒಂದು ಭಾಗ ಕೂದಲು. ಇದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡುವವರಿದ್ದಾರೆ. ಸಮಯದ ಜೊತೆ ಜನರು ಆರೋಗ್ಯಕರ ಕೂದಲನ್ನು ಕಳೆದುಕೊಳ್ತಿದ್ದಾರೆ. ಕೂದಲು ಉದುರುವ ಸಮಸ್ಯೆ ಹೆಚ್ಚಾಗ್ತಿದೆ. ಕೂದಲು ಬೆಳ್ಳಗಾಗುವುದು, ತಲೆ ಹೊಟ್ಟು ಸೇರಿದಂತೆ ಅನೇಕ ಸಮಸ್ಯೆಗಳು ಕಾಡುತ್ತವೆ.
ನಿಮ್ಮ ಕೂದಲು ಕೂಡ ಹೊಳಪು ಕಳೆದುಕೊಂಡು ಉದುರುತ್ತಿದ್ದರೆ ಸರಳ ಮನೆ ಮದ್ದಿನ ಮೂಲಕ ಆರೋಗ್ಯ ಕೂದಲನ್ನು ನಿಮ್ಮದಾಗಿಸಿಕೊಳ್ಳಿ.
ಕರಿಬೇವು : ಕರಿಬೇವಿನ ಪೇಸ್ಟ್ ಮಾಡಿ ಅದಕ್ಕೆ ಒಂದು ಚಮಚ ಮೊಸರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ವಾರದಲ್ಲಿ ಎರಡರಿಂದ ಮೂರು ಬಾರಿ ಈ ಪೇಸ್ಟನ್ನು ತಲೆಗೆ ಹಚ್ಚಿಕೊಳ್ಳಿ. ಇದು ಕೂದಲು ಹೊಳಪು ಪಡೆಯಲು ನೆರವಾಗುತ್ತದೆ.
ಮೆಂತ್ಯ : ಮೆಂತ್ಯವನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ತಲೆಗೆ ಹಚ್ಚಿಕೊಂಡು ಒಣಗಿದ ನಂತ್ರ ತಲೆ ಸ್ನಾನ ಮಾಡಿ. ನಿಧಾನವಾಗಿ ಕೂದಲು ಹೊಳಪು ಪಡೆಯುವ ಜೊತೆಗೆ ಹೊಟ್ಟಿನ ಸಮಸ್ಯೆ ಕಡಿಮೆಯಾಗುತ್ತದೆ.
ಆಲಿವ್ ಆಯಿಲ್ : ಮೂರರಿಂದ ನಾಲ್ಕು ಚಮಚ ಆಲಿವ್ ಆಯಿಲ್ ತೆಗೆದುಕೊಂಡು ಬಿಸಿ ಮಾಡಿ. ಸ್ವಲ್ಪ ಬಿಸಿಯಾದ ಮೇಲೆ ಕೂದಲಿಗೆ ಹಚ್ಚಿ ಮಸಾಜ್ ಮಾಡಿ. ಸುಮಾರು ಒಂದು ಗಂಟೆ ನಂತ್ರ ತಲೆ ತೊಳೆದುಕೊಳ್ಳಿ.
ಮೊಸರು : ಈರುಳ್ಳಿ ರಸಕ್ಕೆ ಮೊಸರನ್ನು ಸೇರಿಸಿ. ಈ ಮಿಶ್ರಣಕ್ಕೆ ಸ್ವಲ್ಪ ನಿಂಬೆ ರಸವನ್ನು ಬೆರೆಸಿ ನೆತ್ತಿಯ ಮೇಲೆ ಹಚ್ಚಿ. ಸ್ವಲ್ಪ ಸಮಯದ ನಂತ್ರ ಕೂದಲನ್ನು ತೊಳೆಯಿರಿ.