HomeKarnatakaBIG NEWS : ರಾಜ್ಯದ ಶಾಲಾ ಮುಖ್ಯ ಶಿಕ್ಷಕರು ಅನ್ಯ ಕಾರ್ಯಕ್ಕೆ ತೆರಳುವಾಗ ‘ಆಹ್ವಾನ...

BIG NEWS : ರಾಜ್ಯದ ಶಾಲಾ ಮುಖ್ಯ ಶಿಕ್ಷಕರು ಅನ್ಯ ಕಾರ್ಯಕ್ಕೆ ತೆರಳುವಾಗ ‘ಆಹ್ವಾನ ಪತ್ರಿಕೆ’ ಲಗತ್ತಿಸುವುದು ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ

ಬೆಂಗಳೂರು : ಮುಖ್ಯ ಶಿಕ್ಷಕರು ಶಾಲೆಯಿಂದ ಅನ್ಯ ಕಾರ್ಯಕ್ಕೆ ತೆರಳುವಾಗ ದಾಖಲೆಯನ್ನು ನಿರ್ವಹಿಸುವುದು ಕಡ್ಡಾಯ ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಮೇಲಿನ ವಿಷಯ ಸಂಬಂಧಿಸಿದಂತೆ ಉಲ್ಲೇಖಿತ ಟಿಪ್ಪಣಿ ದಿನಾಂಕ: 21-09-2024 ರಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ, ಮುಖ್ಯ ಶಿಕ್ಷಕರು ಶಾಲೆಯ ಸಮಯದಲ್ಲಿ ಶಾಲೆಯಲ್ಲಿ ಉಪಸ್ಥಿತರಿಲ್ಲದೇ ಸಭೆ ಮತ್ತು ಸಮಾರಂಭಕ್ಕೆ ತೆರಳಿರುವುದಾಗಿ ತಿಳಿದುಬಂದಿದ್ದು, ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವುದು ಸಾಧ್ಯವಾಗುತ್ತಿರುವುದಿಲ್ಲ. ಪ್ರಯುಕ್ತ ಮುಖ್ಯ ಶಿಕ್ಷಕರು ಇನ್ನು ಮುಂದೆ ಸಭೆ/ಸಮಾರಂಭಗಳಿಗೆ ತೆರಳುವ ನಮಯದಲ್ಲಿ ಚಲನ ವಲನ ವಹಿಯಲ್ಲಿ ನಮೂದಿಸಿ ಸಮಾರಂಭದ ಆಹ್ವಾನ ಪತ್ರಿಕೆ/ಸಭಾ ಸೂಚನಾ ಪತ್ರವನ್ನು ಲಗತ್ತಿಸುವಂತೆ ಎಲ್ಲಾ ಮುಖ್ಯ ಶಿಕ್ಷಕರುಗಳಿಗೆ ನಿರ್ದೇಶಿಸುವಂತೆ ಸೂಚಿಸಿರುತ್ತಾರೆ.

ಮುಖ್ಯ ಶಿಕ್ಷಕರು ಇನ್ನು ಮುಂದೆ ಸಭೆ/ ಸಮಾರಂಭಗಳಿಗೆ ತೆರಳುವ ಸಮಯದಲ್ಲಿ ಚಲನ ವಲನ ವಹಿಯಲ್ಲಿ ಕಡ್ಡಾಯವಾಗಿ ನಮೂದಿಸಿ ಸಮಾರಂಭದ ಆಹ್ವಾನ ಪತ್ರಿಕೆ/ ಸಭಾ ಸೂಚನಾ ಪತ್ರವನ್ನು ಲಗತ್ತಿಸುವಂತೆ ಎಲ್ಲಾ ಮುಖ್ಯ ಶಿಕ್ಷಕರುಗಳಿಗೆ ಅಗತ್ಯ ಸೂಚನೆಗಳನ್ನು ನೀಡುವಂತೆ ರಾಜ್ಯದ ಎಲ್ಲಾ ಉಪನಿರ್ದೇಶಕರುಗಳಿಗೆ ಸೂಚಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular