ಕೆ. ಪ್ರವೀಣ್ ನಿರ್ದೇಶನದ ಧರ್ಮ ಕೀರ್ತಿರಾಜ್ ನಟನೆಯ ‘ಟಕೀಲಾ’ ಇನ್ನೇನು ಶೀಘ್ರದಲ್ಲೇ ತೆರೆ ಮೇಲೆ ಬರುವ ನಿರೀಕ್ಷೆಯಲ್ಲಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ‘ಟಕೀಲಾ’ ಚಿತ್ರತಂಡ ಇಂದು ವ್ಯಾಲೆಂಟೆನ್ಸ್ ಡೇ ಪ್ರಯುಕ್ತ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದು, ಧರ್ಮ ಕೀರ್ತಿರಾಜ್ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ
ಈ ಚಿತ್ರವನ್ನು ಸಿದ್ಧಿ ವಿನಾಯಕ ಫಿಲಂಸ್ ಬ್ಯಾನರ್ ನಲ್ಲಿ ಮರಡಿಹಳ್ಳಿ ನಾಗಚಂದ್ರ ನಿರ್ಮಾಣ ಮಾಡಿದ್ದು, ಶಂಕರ್ ರಾಮ್ ರೆಡ್ಡಿ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.
ಧರ್ಮ ಕೀರ್ತಿರಾಜ್ ಸೇರಿದಂತೆ ನಿಕಿತಾ ಸ್ವಾಮಿ, ಸುಶ್ಮಿತಾ, ಪ್ರವೀಣ್ ನಾಯಕ್, ನಾಗೇಂದ್ರ ಅರಸ್, ಜಯರಾಜ್ ತಾರಾಂಗಣದಲ್ಲಿದ್ದಾರೆ. ರೇಣು ಮ್ಯೂಸಿಕ್ ಕಂಪೋಸ್ ಮಾಡಿದ್ದು, ಗಿರೀಶ್ ಸಂಕಲನ ಹಾಗೂ ಪಿ ಕೆ ಎಚ್ ದಾಸ್ ಅವರ ಛಾಯಾಗ್ರಹಣವಿದೆ.