BIG NEWS: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳ: ಯಕ್ಷಗಾನ ಕಲಾವಿದನ ಮೇಲೆ ಮಾರಣಾಂತಿಕ ಹಲ್ಲೆ

ಉಡುಪಿ: ರಾಜ್ಯದಲ್ಲಿ ಒಂದೆಡೆ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚುತ್ತಿದ್ದರೆ, ಇನ್ನೊದೆಡೆ ಮೀಟರ್ ಬಡ್ಡಿ ದಂಧೆಕೋರರ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ. ಮೀಟರ್ ಬಡ್ಡಿ ದಂಧೆಕೋರನೊಬ್ಬ ಯಕ್ಷಗಾನ ಕಲಾವಿದನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ನಿತಿನ್ ಆಚಾರ್ಯ ಹಲ್ಲೆಗೊಳಗಾದ ಯಕ್ಷಗಾನ ಕಲಾವಿದ. ಸಚಿನ್ ಅಮಿನ್ ಎಂಬಾತ ನಿತಿನ್ ನನ್ನು ಮನೆಯಲ್ಲಿ ಕೂಡಿಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಸಸಿಹಿತ್ಲು ಯಕ್ಷಗಾನ ಮೇಳದ ಕಲಾವಿದನಾಗಿರುವ ನಿತಿನ್ ಆಚಾರ್ಯ, ಉದ್ಯಾವರದ ಸಚಿನ್ ಅಮೀನ್ ಮತ್ತು ಆತನ ತಂದೆಯಿಂದ 2 ಲಕ್ಷ ರೂಪಾಯಿ ಸಾಲ ಪಡೆದಿದ್ದರಂತೆ. ತಂದೆ ಮಗ ಇಬ್ಬರೂ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದು, ನಿತಿನ್ ಪಡೆದ 2 ಲಕ್ಷಕ್ಕೆ 20 ಲಕ್ಷ ರೂಪಾಯಿ ಹಣ ಕೊಡುವಂತೆ ಸತಾಯಿಸಿದ್ದರಂತೆ. ಒಟ್ಟು 20 ಲಕ್ಷ ರೂ ಬಡ್ಡಿ ಕಟ್ಟಿದ್ದಾಗಿ ನಿತಿನ್ ಕಣ್ಣಿರಿಟ್ಟಿದ್ದಾರೆ. ನಿತಿನ್ ನನ್ನು ಸಚಿನ್ ಮನೆಗೆ ಕರೆದೊಯ್ದು ಕೋಣೆಯಲ್ಲಿ ಕೂಡಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾಗಿ ಆರೋಪಿಸಿದ್ದಾರೆ.

ಇನ್ನು ಸಚಿನ್ ಕೂಡ ಯಕ್ಷಗಾನ ಕಲಾವಿದನಾಗಿದ್ದು, ಪಾವಂಜೆ ಮೇಳದ ಕಲಾವಿದನಂತೆ. ಹಲ್ಲೆ ಪ್ರಕರನ ಸಂಅಬ್ಂಧ ಉಡುಪಿಯ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ನಿತಿನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read