Viral Video | ಮಂತ್ರಮುಗ್ದರನ್ನಾಗಿಸುತ್ತೆ ಪೋಷಕರನ್ನು ಕಂಡ ಪುಟ್ಟ ಮಗುವಿನ ಮುಖದಲ್ಲಿ ಅರಳಿದ ʼನಗುʼ

ವೇದಿಕೆಯಲ್ಲಿ ಪ್ರದರ್ಶನ ನೀಡುತ್ತಿದ್ದ ಓರ್ವ ಪುಟ್ಟ ಹುಡುಗಿ ತನ್ನ ಪೋಷಕರನ್ನು ಪ್ರೇಕ್ಷಕರ ಸಾಲಿನಲ್ಲಿ ಕಂಡ ಕೂಡಲೇ ಅವಳ ಮುಖದಲ್ಲಿ ಅರಳಿದ ನಗು ನೋಡಿ ನೆಟ್ಟಿಗರು ತುಂಬಾ ಖುಷಿಯಾಗಿದ್ದಾರೆ. ಹೃದಯಸ್ಪರ್ಶಿಯ ಈ ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವೀಡಿಯೋದಲ್ಲಿ ಇತರ ವಿದ್ಯಾರ್ಥಿಗಳೊಂದಿಗೆ ವೇದಿಕೆಯ ಮೇಲೆ ನಿಂತಿದ್ದ ಪುಟ್ಟ ಹುಡುಗಿ ಕಂಡು ಬರುತ್ತಾಳೆ. ಅವಳು ಹೊಳೆಯುವ ಟಾಪ್ ಮತ್ತು ಸ್ಕರ್ಟ್ ಧರಿಸಿದ್ದು, ಕ್ಲಿಪ್‌ ಆರಂಭದಲ್ಲಿ, ಹುಡುಗಿ ಹಿನ್ನೆಲೆಯಲ್ಲಿ ನೋಡುತ್ತಿರುವುದು ಕಂಡುಬರುತ್ತದೆ.

ನಂತರ ಆಕೆ ಪ್ರೇಕ್ಷಕರಲ್ಲಿ ತನ್ನ ಪೋಷಕರನ್ನು ಹುಡುಕಲು ಪ್ರಾರಂಭಿಸಿದ್ದಾಳೆ. ತನ್ನ ಪೋಷಕರನ್ನು ಕಂಡ ಕೂಡಲೇ ಅವಳ ಮುಖದಲ್ಲಿ ನಗು ಅರಳಿದೆ. “ಒಬ್ಬ ಮಗುವಿಗೆ ಇದಕ್ಕಿಂತ ಉತ್ತಮ ಭಾವನೆ ಇರಲು ಸಾಧ್ಯವಿಲ್ಲ” ಎಂದು ಒಬ್ಬರು ಹೇಳಿದರೆ ಇನ್ನೊಬ್ಬರು, “ನೀವು ಎಷ್ಟೇ ವಯಸ್ಸಾದರೂ, ನಿಮ್ಮನ್ನು ನೋಡಲು ಬರುವುದು ಯಾವಾಗಲೂ ಮುಖ್ಯ” ಎಂದಿದ್ದಾರೆ.

 

View this post on Instagram

 

A post shared by Hetal’s Art (@_hetals_art_)

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read