BREAKING : ಬೆಂಗಳೂರಲ್ಲಿ ‘BMTC’ ಬಸ್ ಚಾಲಕನ ಮೇಲೆ ಬಿಯರ್ ಬಾಟಲ್’ನಿಂದ ಹಲ್ಲೆ, ಮಿರರ್ ಒಡೆದು ಪುಂಡಾಟ.!

ಬೆಂಗಳೂರು : ಪುಂಡನೋರ್ವ ಕುಡಿದ ಮತ್ತಿನಲ್ಲಿ ಬಿಎಂಟಿಸಿ ಬಸ್ ತಡೆದು ಚಾಲಕನ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ.

ಕುಡಿದ ಮತ್ತಿನಲ್ಲಿ ಪುಂಡನೋರ್ವ ಬಿಎಂಟಿಸಿ ಬಸ್ ತಡೆದು ಬಸ್ ನ ಮಿರರ್ ಒಡೆದು ಚಾಲಕನ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಚಾಲಕನ ಕೈಗೆ ಗಾಯಗಳಾಗಿದೆ.

ಬೈಕ್ ನಲ್ಲಿ ಬಂದಿದ್ದ 40 ವರ್ಷದ ಕಿಡಿಗೇಡಿ ಈ ಕೃತ್ಯ ನಡೆಸಿದ್ದಾನೆ. ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಹಾಗೂ ದುಷ್ಕರ್ಮಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read