ಬಳ್ಳಾರಿ : ಕುರುಗೋಡು ಪುರಸಭೆಯ 2025-26ನೇ ಸಾಲಿಗೆ ಆಸ್ತಿ ತೆರಿಗೆ ಮತ್ತು ನೀರಿನ ತೆರಿಗೆಯನ್ನು ಪರಿಷ್ಕೃತಗೊಳಿಸಲಾಗಿದ್ದು, ಈ ಕುರಿತು ಸಾರ್ವಜನಿಕರು ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದು ಎಂದು ಕುರುಗೋಡು ಪುರಸಭೆಯ ಮುಖ್ಯಾಧಿಕಾರಿ ಹರ್ಷವರ್ಧನ ಅವರು ತಿಳಿಸಿದ್ದಾರೆ.
ಆಸ್ತಿ ತೆರಿಗೆ ಉಪ ನೋಂದಣಿ ಕಚೇರಿಯ 2024-25 ನೇ ಸಾಲಿನ ಮಾರುಕಟ್ಟೆ ಮೌಲ್ಯ ದರಗಳ ಮೇಲೆ ಆಸ್ತಿ ಪರಿಷ್ಕರಣೆ ಮಾಡಿ ಆಸ್ತಿ ತೆರಿಗೆಗೆ ಶೇ.03 ರಷ್ಟು ಸಭೆಯ ಮಂಜೂರಾತಿ ಪಡೆದು ಸರ್ಕಾರದ ಆದೇಶದಂತೆ ಹೆಚ್ಚಿಸಲಾಗಿದೆ.
ನೀರಿನ ತೆರಿಗೆಯು 2021-22 ನೇ ಸಾಲಿನ ಮೂರು ವರ್ಷಕ್ಕೊಮ್ಮೆ ಪರಿಷ್ಕರಿಸಿದಂತೆ 2025-26 ನೇ ಸಾಲಿನಿಂದ 2027-28 ನೇ ಸಾಲಿನವರೆಗೆ ನೀರಿನ ತೆರಿಗೆಯನ್ನು ರೂ.120 ರಿಂದ 180 ಕ್ಕೆ ಪರಿಷ್ಕರಿಸಿ ಸಭೆಯ ಮಂಜೂರಾತಿ ಪಡೆದು ಹೆಚ್ಚಿಸಲಾಗಿದೆ.ಹಾಗಾಗಿ ಸಾರ್ವಜನಿಕರು ಆಕ್ಷೇಪಣೆಗಳಿದ್ದಲ್ಲಿ ಏ.07 ರೊಳಗಾಗಿ ಸಲ್ಲಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.