
ಬೆಂಗಳೂರು: ರಾಜ್ಯ ಸರ್ಕಾರ ಹೈಸ್ಪೀಡ್ ಡೀಸೆಲ್ ದರ ಹೆಚ್ಚಳ ಮಾಡಿದೆ. ಹೈಸ್ಪೀಡ್ ಡೀಸೆಲ್ ದರವನ್ನು ಎರಡರಿಂದ ಮೂರು ರೂಪಾಯಿ ಹೆಚ್ಚಳ ಮಾಡುವ ಸಾಧ್ಯತೆ ಇದೆ.
HSD ಮೇಲೆ ಶೇಕಡ 2.73 ರಷ್ಟು ತೆರಿಗೆಯನ್ನು ರಾಜ್ಯ ಸರ್ಕಾರ ಹೆಚ್ಚಳ ಮಾಡಿದೆ. ಇದರಿಂದ ದರ 2-3 ರೂ. ಹೆಚ್ಚಳವಾಗಲಿದೆ ಎನ್ನಲಾಗಿದೆ.
ಸದ್ಯ ಬೆಂಗಳೂರಿನಲ್ಲಿ 88.99 ರೂಪಾಯಿಗೆ HSD ಮಾರಾಟವಾಗುತ್ತಿದೆ.
ಈ ಹಿಂದೆ ಶೇಕಡ 18.44 ರಷ್ಟು ಇದ್ದ ತೆರಿಗೆಯನ್ನು ಸದ್ಯಕ್ಕೆ ಶೇ. 21.17ರಷ್ಟು ಏರಿಕೆ ಮಾಡಲಾಗಿದೆ.
ಇಂದು ಮಧ್ಯರಾತ್ರಿಯಿಂದಲೇ ನೂತನ ದರ ಅನ್ವಯವಾಗಲಿದೆ.