
ಬೆಳಗಾವಿ: ದೇವಾಲಯದಿಂದ ದಲಿತರನ್ನು ಹೊರಹಾಕಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಬೆಳಗಾವಿ ತಾಲೂಕಿನ ಕಂಗ್ರಾಳಿ ಕೆ.ಹೆಚ್. ಗ್ರಾಮದಲ್ಲಿ ಕಲ್ಲೇಶ್ವರ ಮಂದಿರದಿಂದ ದಲಿತರನ್ನು ಹೊರ ಹಾಕಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಕಲ್ಲೇಶ್ವರ ದೇವಸ್ಥಾನದ ಹಕ್ಕು, ಪೂಜೆ ವಿಚಾರಕ್ಕೆ ಸಂಬಂಧಿಸಿದಂತೆ ಗಾವಡೆ ಕುಟುಂಬದವರು ದಲಿತರ ಮೇರೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಪ್ರತಿ ವರ್ಷ ಯುಗಾದಿ ಸಂದರ್ಭದಲ್ಲಿ ಕಲ್ಲೇಶ್ವರ ದೇವಾಲಯದ ಹಕ್ಕು ಬದಲಾವಣೆಯಾಗುತ್ತದೆ. ಆದರೆ, ನಮ್ಮ ಸಮಾಜದವರನ್ನು ದೇವಾಲಯದಿಂದ ಹೊರ ಹಾಕಿದ್ದಾರೆ. ದೇವಸ್ಥಾನದಿಂದ ಹೊರಹಾಕಿ ಹಲ್ಲೆ ನಡೆಸಿ, ದೇವಸ್ಥಾನದ ಹಕ್ಕನ್ನು ಬೇರೆಯವರಿಗೆ ನೀಡಲಾಗಿದೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.