
ತುಮಕೂರು: ಜಾನುವಾರು ಶೆಡ್ ಗೆ ಬೆಂಕಿ ತೆಗೆದು ಅಪಾರ ಪ್ರಮಾಣದ ಹಾನಿಯಾದ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಗೌಡನಕಟ್ಟೆ ಗ್ರಾಮದಲ್ಲಿ ನಡೆದಿದೆ.
ಅಗ್ನಿ ಅವಘಡದಲ್ಲಿ ಎರಡು ಹಸುಗಳು, 4 ಮೇಕೆ, 4 ಕುರಿ, 4 ನಾಯಿ, ಒಂದು ಕರು ಸಾವು ಕಂಡಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ವಾಷಿಂಗ್ ಮಷೀನ್, ಫ್ರಿಜ್ ಸೇರಿದಂತೆ 1.15 ಲಕ್ಷ ರೂಪಾಯಿ ನಗದು, ಒಡವೆ, ದಿನಸಿ ಸಾಮಗ್ರಿ ಸಂಪೂರ್ಣವಾಗಿ ಸುಟ್ಟಿವೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಲತಾ ಮತ್ತು ಶಿರಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.