ಐಪಿಎಲ್ ಕ್ರಿಕೆಟ್‌ನ ಹುಚ್ಚು ಅಭಿಮಾನಿಗಳನ್ನು ಮೋಸಗೊಳಿಸಲು ಆನ್‌ಲೈನ್ ವಂಚಕರು ಹೊಸ ದಾರಿ ಕಂಡುಕೊಂಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಮಹಿಳೆಯೊಬ್ಬರು ಚೆನ್ನೈನ ಚೀಪಾಕ್ ಕ್ರೀಡಾಂಗಣದಲ್ಲಿ ನಡೆದ ಸಿಎಸ್‌ಕೆ vs ಆರ್‌ಸಿಬಿ ಪಂದ್ಯದ ಟಿಕೆಟ್ ಖರೀದಿಸಲು ಹೋಗಿ ಆನ್‌ಲೈನ್ ವಂಚನೆಗೆ ಬಲಿಯಾಗಿದ್ದಾರೆ.
ಫೇಸ್‌ಬುಕ್‌ನಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದ ಸ್ವಯಂ ಸೇವಕನೆಂದು ಹೇಳಿಕೊಂಡ ವ್ಯಕ್ತಿಯೊಬ್ಬರು ಟಿಕೆಟ್ ಮಾರಾಟಕ್ಕಿವೆ ಎಂದು ಹೇಳಿ ನಂಬಿಸಿದ್ದಾನೆ. ಏಳು ಟಿಕೆಟ್‌ಗಳಿಗಾಗಿ 3,500 ರೂಪಾಯಿ ಪಾವತಿಸಿದರೂ, ಟಿಕೆಟ್ ಸಿಗದೆ ಮಹಿಳೆ ಮತ್ತು ಆಕೆಯ ಸ್ನೇಹಿತರು ಕ್ರೀಡಾಂಗಣದ ಹೊರಗೆ ನಿಲ್ಲುವಂತಾಯಿತು.
“ನಾನು ಬೆಂಗಳೂರಿನಿಂದ ಈ ಪಂದ್ಯ ನೋಡಲು ಬಂದಿದ್ದೇನೆ, ಮೋಸ ಮಾಡಬೇಡಿ” ಎಂದು ಆನ್‌ಲೈನ್ ವಂಚಕನಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ. ಆನ್‌ಲೈನ್‌ನಲ್ಲಿ ಟಿಕೆಟ್ ಮಾರಾಟ ಮಾಡುವಾಗ ಎಚ್ಚರಿಕೆ ವಹಿಸಿ ಎಂದು ಕ್ರಿಕೆಟ್ ವಿಶ್ಲೇಷಕ ಕಾರ್ತಿಕ್ ಕಣ್ಣನ್ ಹೇಳಿದ್ದಾರೆ.
ಚೆನ್ನೈನಲ್ಲಿ ಇಂತಹ ವಂಚನೆಗಳು ಸಾಮಾನ್ಯವಾಗಿದೆ. ಎಂ.ಎಸ್. ಧೋನಿ ಅವರ ಜನಪ್ರಿಯತೆಯನ್ನು ದುರುಪಯೋಗಪಡಿಸಿಕೊಂಡು ಜನರು ಮೋಸ ಮಾಡುತ್ತಿದ್ದಾರೆ. ತಮಿಳುನಾಡು ಕ್ರಿಕೆಟ್ ಸಂಸ್ಥೆ (ಟಿಎನ್‌ಸಿಎ) ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಇತರ ಬಳಕೆದಾರರು ಒತ್ತಾಯಿಸಿದ್ದಾರೆ.
ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸುವಾಗ ಎಚ್ಚರಿಕೆ ವಹಿಸಿ, ಪರಿಚಿತರಿಂದ ಮಾತ್ರ ಟಿಕೆಟ್ ಖರೀದಿಸಿ.
Just figured that @VarnataS , who had come from Bangalore had been scammed with 6 other people. It is sad that fans get cheated and scammed. In the age of tech, there needs to be a better mechanism for ticket transfer digitally. #CSKvRCB #IPL2025 pic.twitter.com/NIdpRrx1FA
— Kartik Kannan (@kartik_kannan) March 28, 2025