ಉತ್ತರ ಪ್ರದೇಶದ ಘಾಜಿಪುರದಲ್ಲಿ ಗುರುವಾರ ರಾತ್ರಿ ದುರದೃಷ್ಟಕರ ಘಟನೆಯೊಂದು ಸಂಭವಿಸಿದೆ. ಚಂದ್ರಶೇಖರ್ ರಾವತ್ ಎಂಬ ವ್ಯಕ್ತಿ ಇ-ರಿಕ್ಷಾದ ಮೇಲೆ ನೃತ್ಯ ಮಾಡುತ್ತಾ ರೀಲ್ಸ್ ಮಾಡುತ್ತಿದ್ದಾಗ ವಾಹನ ಚಲಿಸಿದ ಪರಿಣಾಮವಾಗಿ ಆತ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವರದಿಗಳ ಪ್ರಕಾರ, ಚಂದ್ರಶೇಖರ್ ರಾವತ್ ಸ್ಟೇಷನ್ ಪ್ರದೇಶದಲ್ಲಿ ಇ-ರಿಕ್ಷಾದ ಮೇಲೆ ರೀಲ್ಸ್ ಮಾಡುತ್ತಿದ್ದರು. 50 ವರ್ಷದ ಚಂದ್ರಶೇಖರ್ ರಾವತ್ ಶವಪರೀಕ್ಷಾ ಗೃಹದಲ್ಲಿ ಕೆಲಸ ಮಾಡುತ್ತಿದ್ದರು.
ಘಟನೆ ನಡೆದಿದ್ದು ಹೀಗೆ: ಚಂದ್ರಶೇಖರ್ ರಾವತ್ ಸ್ಟೇಷನ್ ಪ್ರದೇಶದಲ್ಲಿ ಇ-ರಿಕ್ಷಾದ ಮೇಲೆ ರೀಲ್ಸ್ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಚಾಲಕ ಇ-ರಿಕ್ಷಾವನ್ನು ಮುಂದಕ್ಕೆ ಚಲಾಯಿಸಿದನು, ಇದರಿಂದ ರಾವತ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಾವತ್ ಅವರನ್ನು ಇ-ರಿಕ್ಷಾದಲ್ಲಿ ಸದರ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಇಸಿಜಿ ನಂತರ ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಮೃತರ ಕುಟುಂಬ ಸದಸ್ಯರಿಗೆ ಈ ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ ಆಸ್ಪತ್ರೆಗೆ ಧಾವಿಸಿದರು.
ವರದಿಗಳ ಪ್ರಕಾರ, ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ ಮತ್ತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
50 साल के चंद्रशेखर रावत ने अपनी जिंदगी में सैकड़ों पोस्टमार्टम कराए। बॉडी चीरने–फाड़ने का काम किया। वही चंद्रशेखर ई रिक्शा पर चढ़कर डांस कर रहा था। अचानक नीचे गिरा और मौत हो गई।
📍जिला गाजीपुर, यूपी pic.twitter.com/rMUfWO26fM— Sachin Gupta (@SachinGuptaUP) March 28, 2025