ಟಾಟಾ ಮೋಟಾರ್ಸ್ 2025 ರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುವ ಮೂಲಕ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಕ್ರಾಂತಿ ಸೃಷ್ಟಿಸಲು ಸಜ್ಜಾಗಿದೆ. ಈ ಸ್ಕೂಟರ್ 200 ಕಿ.ಮೀ ರೇಂಜ್ ನೀಡುತ್ತದೆ ಎಂದು ಹೇಳಲಾಗುತ್ತಿದೆ. ಪೆಟ್ರೋಲ್ ದರಗಳು ಹೆಚ್ಚುತ್ತಿರುವ ಕಾರಣ, ಈ ಸ್ಕೂಟರ್ ದೈನಂದಿನ ಪ್ರಯಾಣಿಕರಿಗೆ ಹೇಳಿ ಮಾಡಿಸಿದಂತಿದೆ.
ಈ ಎಲೆಕ್ಟ್ರಿಕ್ ಸ್ಕೂಟರ್ ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಡಿಜಿಟಲ್ ಡ್ಯಾಶ್‌ಬೋರ್ಡ್, ಎಲ್ಇಡಿ ದೀಪಗಳು, ಅಲಾಯ್ ವೀಲ್‌ಗಳು, ಡಿಸ್ಕ್ ಮತ್ತು ಡ್ರಮ್ ಬ್ರೇಕ್‌ಗಳು ಇದರಲ್ಲಿದೆ. 3.5kWh ಲಿಥಿಯಂ-ಐಯಾನ್ ಬ್ಯಾಟರಿ ಒಂದೇ ಚಾರ್ಜ್‌ನಲ್ಲಿ 200 ಕಿ.ಮೀ ರೇಂಜ್ ನೀಡುತ್ತದೆ.
ಈ ಸ್ಕೂಟರ್ ಆಗಸ್ಟ್ 2025 ರಲ್ಲಿ ₹1-1.2 ಲಕ್ಷ ಬೆಲೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು ಓಲಾ ಎಸ್1 ಪ್ರೊ ಮತ್ತು ಬಜಾಜ್ ಚೇತಕ್ ಸ್ಕೂಟರ್‌ಗಳಿಗೆ ಸ್ಪರ್ಧೆ ನೀಡಲಿದೆ. ಟಾಟಾ ಮೋಟಾರ್ಸ್ ದೇಶಾದ್ಯಂತ ಬಲವಾದ ಸೇವಾ ಜಾಲವನ್ನು ಹೊಂದಿರುವುದರಿಂದ, ಗ್ರಾಹಕರು ಯಾವುದೇ ತೊಂದರೆ ಅನುಭವಿಸಬೇಕಾಗಿಲ್ಲ.
ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಟಾಟಾ ಎಂಟ್ರಿ ನೀಡುತ್ತಿರುವುದು ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡಲಿದೆ. ಈ ಸ್ಕೂಟರ್ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಕಾರ್ಯಕ್ಷಮತೆ ನೀಡುವ ನಿರೀಕ್ಷೆಯಿದೆ.