ಹೈದರಾಬಾದ್‌ನ ನ್ಯಾಯಾಲಯವು 2023 ರ ಜೂನ್‌ನಲ್ಲಿ ಮಹತ್ವಾಕಾಂಕ್ಷಿ ಟಿವಿ ನಟಿಯನ್ನು ಕೊಲೆ ಮಾಡಿದ 36 ವರ್ಷದ ಅರ್ಚಕನಿಗೆ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಭಾರತೀಯ ದಂಡ ಸಂಹಿತೆಯ ಸೂಕ್ತ ವಿಭಾಗಗಳ ಅಡಿಯಲ್ಲಿ ಆತನನ್ನು ತಪ್ಪಿತಸ್ಥನೆಂದು ಘೋಷಿಸಿದ ನ್ಯಾಯಾಲಯ, ₹10 ಲಕ್ಷ ದಂಡವನ್ನೂ ವಿಧಿಸಿದೆ.
ಅರ್ಚಕ ವೆಂಕಟ್ ಸೂರ್ಯ ಸಾಯಿ ಕೃಷ್ಣ, ಅಲಿಯಾಸ್ ಸಾಯಿ ಕೃಷ್ಣ, ಈಗಾಗಲೇ ವಿವಾಹಿತನಾಗಿದ್ದು, ಮದುವೆಯಾಗುವುದಾಗಿ ನಂಬಿಸಿ ಸಂತ್ರಸ್ತೆ ಕುರುಗಂಟಿ ಅಪ್ಸರಾರನ್ನು ಭೇಟಿಯಾಗಲು ಆಹ್ವಾನಿಸಿದ್ದ. ಆಕೆ ಸಾಯಿ ಕೃಷ್ಣನನ್ನು ಮದುವೆಯಾಗಲು ಬಯಸಿದ್ದಳು ತನ್ನನ್ನು ಮದುವೆಯಾಗಲು ವಿಫಲವಾದರೆ ಆತನನ್ನು ಬಯಲು ಮಾಡುತ್ತೇನೆ ಎಂದು ಹೇಳಿದ್ದಳು. ಆಕೆಯ ವರ್ತನೆಯಿಂದ ಬೇಸತ್ತ ಆತ ಕೊಲೆ ಮಾಡಲು ನಿರ್ಧರಿಸಿದ ಎಂದು ಪ್ರಾಸಿಕ್ಯೂಷನ್ ಹೇಳಿದೆ.
ಸಾಯಿ ಕೃಷ್ಣ ಈಗಾಗಲೇ ವಿವಾಹಿತನಾಗಿದ್ದರೂ, ಆತನು ತನ್ನನ್ನು ಮದುವೆಯಾಗುತ್ತಾನೆ ಎಂದು ಅಪ್ಸರಾ ನಂಬಿದ್ದಳು. 30 ವರ್ಷದ ಅಪ್ಸರಾ ತಮಗೊಂದು ವಿಶೇಷ ಸಂಬಂಧವಿದೆ ಎಂದು ಭಾವಿಸಿದ್ದಳು. ಸಾಯಿ ಕೃಷ್ಣ ಅರ್ಚಕನಾಗಿ ಕೆಲಸ ಮಾಡುತ್ತಿದ್ದ ದೇವಸ್ಥಾನಕ್ಕೆ ಅಪ್ಸರಾರ ತಾಯಿ ಆಗಾಗ ಭೇಟಿ ನೀಡುತ್ತಿದ್ದ ಕಾರಣ ಅವರು ಭೇಟಿಯಾಗಿದ್ದರು. 2023 ರ ಆರಂಭದಲ್ಲಿ ಅವರ ಸಂಬಂಧ ಪ್ರಾರಂಭವಾಯಿತು.
2023 ರ ಜೂನ್ 3 ರಂದು, ಸಾಯಿ ಕೃಷ್ಣ ತನ್ನ ಕಾರಿನಲ್ಲಿ ಅಪ್ಸರಾರನ್ನು ಆಕೆಯ ಮನೆಯಿಂದ ಕರೆದುಕೊಂಡು ಹೋಗಿದ್ದು, ಆಕೆಯನ್ನು ಉಸಿರುಗಟ್ಟಿಸಿ ಮತ್ತು ಕಲ್ಲಿನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದ.
ಸರೂರ್‌ನಗರದಲ್ಲಿರುವ ತನ್ನ ಮನೆಗೆ ಬಂದ ನಂತರ, ಸಾಯಿ ಕೃಷ್ಣನು ಶವವನ್ನು ಕಾರಿನಟ್ಟುಕೊಂಡು ಎರಡು ದಿನಗಳ ಕಾಲ ಪಾರ್ಕಿಂಗ್ ಸ್ಥಳದಲ್ಲಿ ಇರಿಸಿದ್ದ. ವಾಸನೆಯನ್ನು ಮರೆಮಾಡಲು ಪ್ರತಿದಿನ ರೂಮ್ ಫ್ರೆಶ್ನರ್‌ಗಳನ್ನು ಸಿಂಪಡಿಸಿದ್ದು, ನಂತರ, ಆತನು ತನ್ನ ಮನೆಯ ಸಮೀಪದ ಸರ್ಕಾರಿ ಕಚೇರಿಯ ಬಳಿಯ ಮ್ಯಾನ್‌ಹೋಲ್‌ಗೆ ಶವವನ್ನು ಎಸೆದಿದ್ದ.
ಪೋಲಿಸರ ಪ್ರಕಾರ, ಆತನು ಅದನ್ನು ಮರಳಿನಿಂದ ತುಂಬಿಸಿ ಸಿಮೆಂಟ್‌ನಿಂದ ಮುಚ್ಚಿದ್ದ. ಸಾಯಿ ಕೃಷ್ಣ ನಂತರ ಎರಡು ಟ್ರಕ್ ಲೋಡ್ ಕೆಂಪು ಮಣ್ಣನ್ನು ತಂದು ಮ್ಯಾನ್‌ಹೋಲ್ ಅನ್ನು ಮುಚ್ಚಿದ್ದು, ಸಾಕ್ಷ್ಯಗಳನ್ನು ನಾಶಮಾಡಲು ಅಪ್ಸರಾರ ಕೈಚೀಲ ಮತ್ತು ಸಾಮಾನುಗಳನ್ನು ಸುಟ್ಟುಹಾಕಿದ್ದ. ನಂತರ, ತನ್ನ ಕಾರನ್ನು ತೊಳೆದು ತನ್ನ ಅಪಾರ್ಟ್‌ಮೆಂಟ್‌ನಲ್ಲಿ ನಿಲ್ಲಿಸಿದ್ದನಾದರೂ ಮರುದಿನ, ಆತನು ಸ್ಥಳಕ್ಕೆ ಹಿಂತಿರುಗಿ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಮ್ಯಾನ್‌ಹೋಲ್ ಅನ್ನು ಕಾಂಕ್ರೀಟ್‌ನಿಂದ ಮುಚ್ಚಲು ಕೆಲವು ಕಾರ್ಮಿಕರನ್ನು ನೇಮಿಸಿಕೊಂಡಿದ್ದ.
ನಂತರ, ಸಾಯಿ ಕೃಷ್ಣನು ಅಪ್ಸರಾರ ತಾಯಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಆಕೆಯ ಮಗಳು ಕಾಣೆಯಾಗಿದ್ದಾಳೆ ಎಂದು ವರದಿ ಮಾಡಿದನು. ಆದಾಗ್ಯೂ, ಆತನ ಕಥೆ ಸಿಸಿಟಿವಿ ದೃಶ್ಯಾವಳಿಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಪೊಲೀಸರು ಕಂಡುಕೊಂಡರು. ವಿಚಾರಣೆಯ ಸಮಯದಲ್ಲಿ ಆತ ಮಹಿಳೆಯನ್ನು ಕೊಂದಿರುವುದನ್ನು ಒಪ್ಪಿಕೊಂಡಿದ್ದು, ಶಂಷಾಬಾದ್ ಪೊಲೀಸರು ಆತನನ್ನು ಬಂಧಿಸಿದ್ದರು.
Sai Krishna (36), a temple priest, was allegedly responsible for the death. The woman, Apsara (30), was said to have been in a relationship with him for over a year.
No Ponga, No 2₹ Debunker, Journalist will tweet about this.
Incident from Saroornagar, A.P pic.twitter.com/5XPeEV2Lo5
— Rap Midfielder (@nocap723) March 27, 2025